ಟ್ರೆಂಡಿಂಗ್

ಧೂಳುಮಯ ರಸ್ತೆ: ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಒತ್ತಾಯ

ಕುಶಾಲನಗರ, ಫೆ 28: ನಂಜರಾಯಪಟ್ಟಣ ಗ್ರಾಪಂ ಸಮೀಪ ಬಾಳೆಗುಂಡಿ ಹಾಡಿ ಬಳಿಯಿಂದ ವಾಲ್ನೂರು ತ್ಯಾಗತ್ತೂರಿನ ಕೃಷ್ಣಾಪುರ ವರೆಗೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಪೂರತಣಗೊಳಿಸುವಂತೆ ಒತ್ತಾಯ ಕೇಳಿಬಂದಿದೆ.

ನಿಧಾನಗತಿ ಕಾಮಗಾರಿ, ನಿರ್ವಹಣೆ‌ ಕೊರತೆಯಿಂದ ಈ‌ ಭಾಗದಲ್ಲಿ ರಸ್ತೆ ಸಂಚಾರ ದುಸ್ಥರವಾಗಿದೆ. ಶಾಲಾ ವಿದ್ಯಾರ್ಥಿಗಳು, ಹಾಡಿಯ ನಿವಾಸಿಗಳು ನಡೆದು ಸಾಗಲು ತೀವ್ರ ಅನಾನುಕೂಲ ಎದುರಾಗಿದೆ. ವಾಹನ ಸಂಚಾರಕ್ಕೆ ಕೂಡ ಸಂಚಕಾರ ಎದುರಾಗಿದ್ದು ಅಪೂರ್ಣ ಕಾಮಗಾರಿಯಿಂದ ಈ ಭಾಗ ಸಂಪೂರ್ಣ ಧೂಳುಮಯವಾಗಿದೆ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು, ಇಲ್ಲದಿದ್ದಲ್ಲಿ ಗ್ರಾಮಸ್ಥರ ಸಹಕಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!