ಕ್ರೀಡೆ

ಪ್ರಥಮ ವರ್ಷದ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ:ಯಶಸ್ವಿಯಾಗಿ ನಡೆದ ಆಟಗಾರ ಬಿಡ್ಡಿಂಗ್ ಪ್ರಕ್ರಿಯೆ

ಮಡಿಕೇರಿ, ಜ 07:ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ(ನಿ)ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 29ರಂದು ಸಿದ್ದಾಪುರದಲ್ಲಿ ನಡೆಯಲಿದೆ.ಬುಧವಾರ ಕುಶಾಲನಗರ ತಾಲ್ಲೂಕಿನ ಹೊಸಕೋಟೆಯ ಕೂರ್ಗ್ ಆರೆಂಜ್ ಬ್ಲಾಸಮ್ ಸ್ಪಾ ಮತ್ತು ರೆಸಾರ್ಟ್ ನಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘದ(ನಿ)ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘದ ಸದಸ್ಯರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ವಿನೂತನವಾಗಿ ಟರ್ಫ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ,ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕಿ ಸವಿತಾ ರೈ,ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಪತ್ರಕರ್ತರ ಕ್ರಿಕೆಟ್ ಬಿಡ್ಡಿಂಗ್ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಪ್ರೆಸ್ ಕ್ಲಬ್ ಮೂಲಕ ಪತ್ರಕರ್ತರಿಗೆ ಹೊಸತನವನ್ನು ಪರಿಚಯಿಸಿದ್ದರು.
ಇದೀಗ ವಿನೂತನವಾಗಿ ಪತ್ರಕರ್ತರಿಗೆ ಟರ್ಫ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವುದು ಸಂತೋಷದ ವಿಷಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ,ಉದ್ಯಮಿ ಹಾಗೂ ಕುಶಾಲನಗರ ಕಾಂಗ್ರೆಸ್ ಮುಖಂಡ ಅಜೀಜ್ ಮಾತನಾಡಿ ಪತ್ರಕರ್ತರು ಸದಾ ಒತ್ತಡದಿಂದ ಕೆಲಸ ನಿರ್ವಹಿಸುವವರು.ಸುದ್ದಿಯ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ. ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ,ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಇದ್ದರು.

ಬಿಡ್ಡಿಂಗ್ ಪ್ರಕ್ರಿಯೆಯನ್ನು ಸಿದ್ದಾಪುರದ ಸಿಟಿ ಬಾಯ್ಸ್ ತಂಡ ಪದಾಧಿಕಾರಿಗಳು ಯಶಸ್ವಿಯಾಗಿ ನಡೆಸಿಕೊಟ್ಟರು.
ಪ್ರಥಮ ವರ್ಷದ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿಗೆ ಒಟ್ಟು
ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘದ 80 ಸದಸ್ಯರು ನೋಂದಣಿ ಮಾಡಿಕೊಂಡಿದ್ದರು.
ಸಂಘದ ಉಪಾಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಕಾರ್ಯಕ್ರಮವನ್ನು ನಿರೂಪಿಸಿದರು.ನಿರ್ದೇಶಕರಾದ ಕೆ.ಬಿ ಶಂಶುದ್ದೀನ್ ಸ್ವಾಗತಿಸಿ,ಆರ್.ಸುಬ್ರಮಣಿ ವಂದಿಸಿದರು.

ತಂಡಗಳ ಮಾಹಿತಿ:

1)ಮಾಲೀಕರು : ಇಸ್ಮಾಯಿಲ್ ಕಂಡಕರೆ
ನಾಯಕ : ನೌಫಲ್ ಕಡಂಗ
ತಂಡ : ಮೀಡಿಯಾ ಸೂಪರ್ ಕಿಂಗ್ಸ್

2)ಮಾಲೀಕರು : ಸಂತೋಷ್ ರೈ, ಸವಿತಾ ರೈ,
ನಾಯಕ :ಎ.ಎಸ್ ಮುಸ್ತಫ
ತಂಡ: ಮೀಡಿಯಾ ರಾಯಲ್ಸ್

3)ಮಾಲೀಕರು : ಎಂ.ಎನ್ ಚಂದ್ರಮೋಹನ್
ನಾಯಕ : ಹೆಚ್.ಸಿ ಜಯಪ್ರಕಾಶ್
ತಂಡ :ಕಾವೇರಿ ಮೀಡಿಯಾ ಕ್ರಿಕೆಟರ್ಸ್

4)ಮಾಲೀಕರು : ಸಣ್ಣುವಂಡ ಕಿಶೋರ್ ನಾಚಪ್ಪ, ವಿ.ವಿ ಅರುಣ್ ಕುಮಾರ್,
ನಾಯಕ : ಮಂಡೇಡ ಅಶೋಕ್
ತಂಡ: ಗೋಣಿಕೊಪ್ಪ ಮೀಡಿಯಾ

5)ಮಾಲೀಕರು :ಪಿ.ವಿಷ್ಣು
ನಾಯಕ : ಡಾ.ಹೇಮಂತ್ ಕುಮಾರ್
ತಂಡ : ಟೀಮ್ ಅಯರ

6)ಮಾಲೀಕರು: ಎ.ಎನ್ ಪದ್ಮನಾಭ
ನಾಯಕ : ಪ್ರೇಮ್
ತಂಡ : ನನ್ನ ಧ್ವನಿ

7)ಮಾಲೀಕರು: ಚೆಯ್ಯಂಡ ಸತ್ಯ
ನಾಯಕ : ಆದರ್ಶ್
ತಂಡ: ಬ್ರಾಡ್ ಕಾಸ್ಟ್ ಇಬ್ನಿ ಬ್ಲಾಸ್ಟರ್ಸ್

8)ಮಾಲೀಕರು : ಮಚ್ಚಮಾಡ ಅನೀಶ್ ಮಾದಪ್ಪ
ನಾಯಕ : ದಿವಾಕರ
ತಂಡ : ಟೀಂ ಕಾಫಿ ನಾಡ್

Related Articles

Leave a Reply

Your email address will not be published. Required fields are marked *

Back to top button
error: Content is protected !!