ಚುನಾವಣೆ

ನಂಜರಾಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ

ಕುಶಾಲನಗರ, ಸೆ 09: ನಂಜರಾಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಡ್ಲಳ್ಳಿ ಪ್ರಸನ್ನ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಅವಿಶ್ವಾಸ‌ ನಿರ್ಣಯಣದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಹಡ್ಲಳ್ಳಿ ಪ್ರಸನ್ನ ಅವರನ್ನು ಅವಿರೋಧವಾಗಿ ಆಯ್ಕೆ‌ ಮಾಡಲಾಗಿದೆ.

ಈ ಸಂದರ್ಭ ಉಪಾಧ್ಯಕ್ಷ ಕೆಮ್ಮಾರನ ಲೋಕನಾಥ್, ನಿರ್ದೇಶಕರಾದ ​ಕಲ್ಲೇಗೌಡನ ಸುರೇಶ್, ​ಹಡ್ಲಳ್ಳಿ ಸತೀಶ್, ಸುಭಾಶ್, ಕೆ. ವೇಲಾಯುಧ, ಜೆ. ಸಿ. ತಮ್ಮಯ್ಯ
​ಪಾಣತ್ತಲೆ ಕುಸುಮ, ಸಿ. ವಿ. ಪುಷ್ಪಾವತಿ ಹಾಗೂ ​ಕಾರ್ಯದರ್ಶಿ ಕುದುಕುಳಿ ಹರಿಣಿ ಕುಮಾರಿ ಇದ್ದರು.
ನಂಜರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ, ಗೆಳೆಯರ ಬಳಗದ
ಮೂಟೇರ ಬ್ರಿಜೇಶ್, ಕಲ್ಲೇಗೌಡನ ರವಿ ಬೆಳ್ಯಪ್ಪ, ಮೂಟೇರ ಅನಿಲ್, ಕೆದಂಬಾಡಿ ಚೇತನ್ ಅವರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!