ಕುಶಾಲನಗರ, ನ 25 : ಸೋಮವಾರ ನಡೆದ ಕೊಡಗು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳೆಯರ ವಿಭಾಗದ ವಿದ್ಯಾರ್ಥಿನಿಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡು ಕಾಲೇಜಿಗೆ ಹೆಮ್ಮೆತಂದಿದ್ದಾರೆ.
ಪಂದ್ಯದ ಉತ್ತಮ ಧಾಳಿಗಾರ್ತಿಯಾಗಿ ದಿವ್ಯಾ ಧರ್ಮೇಗೌಡ ಗಮನಸೆಳೆದರು.
ಪಂದ್ಯದ ಪುರುಷರ ವಿಭಾಗಲ್ಲೂ ದ್ವಿತೀಯ ಬಹುಮಾನ ಗಳಿಸಿದ್ದು ವಿದ್ಯಾರ್ಥಿ ಹರ್ಷ ಉತ್ತಮ ಧಾಳಿಕಾರ ನಾಗಿ ಗಮನ ಸೆಳೆದಿದ್ದಾನೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪುಟ್ಟರಾಜು ಪ್ರಶಂಶಿಸಿದ್ದಾರೆ. ತಂಡದ ತರಬೇತುದಾರರಾಗಿ ಡಾ.ಪಿ.ಪಿ. ಜಯಂತಿ ಕಾರ್ಯನಿರ್ವಹಿಸಿದ್ದರು.
Back to top button
error: Content is protected !!