ಕಾರ್ಯಕ್ರಮ

ರಾಷ್ಟ್ರೀಯ ಭ್ರಷ್ಟಾಚಾರ ಸಮಿತಿ ವಿವಿಧ ಕಛೇರಿಗಳಿಗೆ ಭೇಟಿ

ಕೂಡಿಗೆ, ನ. 22: ಜಿಲ್ಲೆಯ
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಕಾರ್ಯಾಚರಣೆ ಸಮಿತಿ, ಕುಶಾಲನಗರ ತಾಲೂಕು ಸಮಿತಿ ವತಿಯಿಂದ ಕುಶಾಲನಗರದ ವಿವಿಧ ಕಛೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿರುತ್ತಾರೆ
ಕಾರ್ಯಾಚರಣೆಯಲ್ಲಿ ಕುಶಾಲನಗರದ ಅಂಬೇಡ್ಕರ್ ವಸತಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಮಾಹಿತಿ,
ಕುಶಾಲನಗರ ಪುರಸಭೆಗೆ ಭೇಟಿ ನೀಡಿ ಮುಖ್ಯಾಧಿಕಾರಿ ಭೇಟಿ ಮಾಡಿ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೊಳ್ಳಲು ತಿಳಿಸಲಾಗಿದೆ.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
ನೊಂದಾವಣಿ ಕಚೇರಿಗೆ ಭೇಟಿ ನೀಡಿ, ಭ್ರಷ್ಟಾಚಾರ ತಡೆಯುವಂತೆ ಮುಖ್ಯಸ್ಥರಿಗೆ ತಿಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಎಸ್ .ಮಹೇಶ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಎಚ್ ಎಲ್ ಕಾರ್ಯದರ್ಶಿ ಡಿ.ವಿ .ಗಣೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಗುರುಪಾದ ಸ್ವಾಮಿ ,ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯಾಧ್ಯಕ್ಷ ಕುಶಾಲಪ್ಪ , ಖಜಾಂಚಿ ಶಿವಾನಂದ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!