ಕುಶಾಲನಗರ, ಡಿ 14: ನಿವೃತ್ತ ನೌಕರರ ಕೂಟದ 7 ನೇ ವಾರ್ಷಿಕೋತ್ಸವ ಸಮಾರಂಭ ಪಟ್ಟಣದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ನಿವೃತ್ತ ನೌಕರರ ಕೂಟದ ಮಾಜಿ ಅಧ್ಯಕ್ಷ ಚಂಗಪ್ಪ ಮಾತನಾಡಿ, ತಮ್ಮ ವೃತ್ತಿಯಿಂದ ಬಿಡುಗಡೆ ಹೊಂದಿದ ತಕ್ಷ ಣ ಇನ್ನೇನು ನಮ್ಮ ಬದುಕೇ ಮುಗಿಯಿತು ಎಂದುಕೊಳ್ಳುತ್ತಾರೆ. ಏಕಾಂಗಿತನದಿಂದ ನಿಮ್ಮಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ, ಇದಕ್ಕೆ ನೀವು ಅವಕಾಶ ಮಾಡಿಕೊಡಬಾರದು, ಬಿಡುವಿನ ಸಮಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಓದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ ಎಂದರು.
ವಯಸ್ಸು ದೇಹಕ್ಕೆ ಹೊರತೂ ಮನಸ್ಸಿಗಲ್ಲ. ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬೇಕೆಂದು ಚಂಗಪ್ಪ ಹೇಳಿದರು.
ಹೆಚ್.ಟಿ. ಪೊನ್ನಪ್ಪ ಮಾತನಾಡಿ, ಸಮಾಜಕ್ಕೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ತಮ್ಮ ಅನುಭವಗಳನ್ನು ಸಮಾಜದ ಅಭಿವೃದ್ಧಿಗಾಗಿ ಬಳಸುತ್ತಿರುವುದರಿಂದ ನಿವೃತ್ತ ನೌಕರರ ಕೂಟ ಜನರ ಮೆಚ್ಚುಗೆಗೂ ಪಾತ್ರವಾಗಿದೆ ಎಂದರು.
ಮಾಜಿ ಕಾರ್ಯದರ್ಶಿ ನಾಗರಾಜು ಮಾತನಾಡಿ, ಕೂಟದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಕೂಟದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಹಿರಿಯ ನಿವೃತ್ತ ನೌಕರರಾದ ಹೆಚ್.ಟಿ. ಪೊನ್ನಪ್ಪ, ಹೆಚ್.ಗುಡ್ಡಪ್ಪ, ಬಿ.ಪಿ.ಪ್ರಕಾಶ್, ಕೆ.ಟಿ.ಅಶೋಕ, ಟಿ.ಕೆ.ಚಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಈ ಸಂದರ್ಭ ಕೂಟದ ಅಧ್ಯಕ್ಷ ಎ.ಎಸ್. ಜೋಯಪ್ಪ, ಕಾರ್ಯದರ್ಶಿ ಜಿ.ಎನ್.ದೇವಯ್ಯ, ಖಜಾಂಚಿ ಕೆ.ಟಿ.ಅಶೋಕ, ನಿರ್ದೇಶಕರಾದ ಬಿ.ಡಿ.ರವೀಂದ್ರ, ಬಿ.ಹೆಚ್.ರಮೇಶ್, ಬಿ.ಯು.ಲೋಕೇಶ್, ಹೆಚ್.ಎಸ್.ಸೋಮಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
Back to top button
error: Content is protected !!