ಕ್ರೀಡೆ

ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಅರಣ್ಯ ಇಲಾಖೆ ತಂಡ ಅಯ್ಕೆ

ಕೂಡಿಗೆ,ನ‌ 6: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಪುರುಷರ ಹಾಕಿ ತಂಡಕ್ಕೆ ಕೊಡಗು ಅರಣ್ಯ ಇಲಾಖೆಯ ಹಾಕಿ ಕ್ರೀಡಾಪಟುಗಳನ್ನು ಒಳಗೊಂಡಂತೆ ರಾಷ್ಟ್ರೀಯ ಮಟ್ಟದ ಪುರುಷರ ಹಾಕಿ ಪಂದ್ಯಾವಳಿಗೆ ತಂಡ ಆಯ್ಕೆಗೊಂಡಿದೆ.
ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟವು ಉತ್ತರ ಖಂಡದ ಡೆಹ್ರಾಡೂನ್ ಕ್ರೀಡಾಂಗಣದಲ್ಲಿ 2025-26ನೇ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವು ನವಂಬರ್ 12-ರಿಂದ16 ರವರೆಗೆ ನಡೆಯಲಿದೆ.
ಈ ತಂಡದಲ್ಲಿ ಅರಣ್ಯ ಇಲಾಖೆಯ ವಿವಿಧ ಹುದ್ದೆಯ ಅಧಿಕಾರಿ ವರ್ಗದವರಲ್ಲಿ ಕೊಡಗು, ಮೈಸೂರು, ಧಾರವಾಡ, ಬೆಂಗಳೂರು ಹಾಸನ, ಭಾಗ ಅರಣ್ಯ ಇಲಾಖೆಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಈ ತಂಡದಲ್ಲಿ ಕೊಡಗಿನ ಹೆಚ್ಚು ಅಟಗಾರಿದ್ದು, ಜಿಲ್ಲೆಯಿಂದ ಹೊರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇದೀಗ ಅರಣ್ಯ ಇಲಾಖೆಯ ಮೂಲಕ ಹಾಕಿ ತಂಡದಲ್ಲಿ ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಹಾಕಿ ತಂಡವು ಸತತವಾಗಿ ಮೂರು ಬಾರಿ ರಾಷ್ಟ್ರೀಯ ಹಾಕಿ ಕ್ರೀಡಾಕೂಟದಲ್ಲಿ ವಿಜೇತರಾಗಿರುತ್ತಾರೆ.
ಅರಣ್ಯ ಇಲಾಖೆಯ ಕ್ರೀಡಾಪಟುಗಳು ಕಳೆದ ಒಂದು ತಿಂಗಳುಗಳಿಂದ ಕೂಡಿಗೆ ಕ್ರೀಡಾಶಾಲೆಯ ಹಾಕಿ ಟ್ರರ್ಫ್ ಮೈದಾನದಲ್ಲಿ ಕ್ರೀಡಾ ಶಾಲೆ ಹಾಕಿ ತರಬೇತಿದಾರ ವೆಂಕಟೇಶ್ ನವರಿಂದ ತರಬೇತಿ ಪಡೆದಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!