ಪ್ರಕಟಣೆ

ಇಂದು ಕಾಲೇಜುಗಳ ಪ್ರಾಚಾರ್ಯರ, ಉಪನ್ಯಾಸಕರ ಸಂಘದ ಪ್ರತಿಭಟನಾ ಮೆರವಣಿಗೆ.

ಕುಶಾಲನಗರ. ನ. 07: ಜಿಲ್ಲಾ ಶಾಲಾ ಶಿಕ್ಷಣ ( ಪದವಿಪೂರ್ವ) ಕಾಲೇಜುಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘ ಮಡಿಕೇರಿ. ಇವರ ವತಿಯಿಂದ ನ.7 (ಇಂದು) ಪ್ರಾಂಶುಪಾಲರ/ ಉಪನ್ಯಾಸಕ ಸಂಘದ ವತಿಯಿಂದ ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಮಡಿಕೇರಿ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಶಾಂತಿಯುತ ಮೆರವಣಿಗೆ ಹೊರಟು ಜಿಲ್ಲಾಧಿಕಾರಿರವರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಕೂಡಿಗೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ಹಂಡ್ರಂಗಿ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 2 ರಂದು ಬೆಂಗಳೂರಿನ ಶಾಸಕರ ಭವನದಲ್ಲಿ ತೆಗೆದುಕೊಂಡಿರುವ ನಿರ್ಣಯದ ಪ್ರಕಾರ 31-10 – 2025 ರಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ DSERT ಹೊರಡಿಸಿರುವ ಜಿಂಟಿ ಸುತ್ತೋಲೆಯನ್ನು ಹಿಂಪಡೆಯುವಂತೆ ಮತ್ತು ಇತರ 12. ಬೇಡಿಕೆಗಳಿಗೆ ಅಗ್ರಹಿಸಿ ,ಶಾಂತಿಯುತವಾಗಿ ಮೆರವಣಿಗೆ ಸಾಗಿ ಮುಖ್ಯಮಂತ್ರಿ, ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸುವ ವಿಷಯವಾಗಿ ಕೊಡಗು ಜಿಲ್ಲಾಧಿಕಾರಿರವರಿಗೆ ಮುಖೇನ ಮನವಿಯನ್ನು ಸಲ್ಲಿಸಲಾಗುವುದು ಎಂದು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!