ಸುದ್ದಿಗೋಷ್ಠಿ

ಮಾಜಿ ಶಾಸಕ ಅಪ್ಪಚ್ಚುರಂಜನ್ ಆರೋಪಗಳು ಹಾಸ್ಯಾಸ್ಪದ: ಚರ್ಚೆಗೆ ತಾವು ಸಿದ್ದ: ವಿ.ಪಿ.ಶಶಿಧರ್

ಕುಶಾಲನಗರ, ಸೆ 25: ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಡಾ.ಮಂತರ್ ಗೌಡ ಕಳೆದ ಎರಡೂವರೆ ವರ್ಷದಲ್ಲಿ ಭರಪೂರ ಅನುದಾನಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಾಸಕರಾದ ಅಲ್ಪ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿ, ಸೇತುವೆಗಳ ನಿರ್ಮಾಣ, ಸುಗ್ಗಿಕಟ್ಟೆಗಳ ಅಭಿವೃದ್ಧಿ, ಹಾರಂಗಿ ಕಾಲುವೆಗಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳು ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಮಂತರ್ ಗೌಡ ಅವರು ಅನುದಾನ ಒದಗಿಸುತ್ತಿದ್ದಾರೆ. ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲಾಗಿತ್ತಾದರೂ
ಮಳೆ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಂಡಿರಲಿಲ್ಲ. ಇದನ್ನೇ ದೊಡ್ಡ ವಿಚಾರ ಎನ್ನುವಂತೆ ಬಿಂಬಿಸಿ ಮಾಜಿ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ರಸ್ತೆ ಗುಂಡಿ ಮುಚ್ಚುವ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ. ಅವರ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳು ಗುಣಮಟ್ಟದ ಕೊರತೆಯಿಂದ ಇಂದಿನ ಈ ದುಸ್ಥಿಗೆ ಕಾರಣವಾಗಿದೆ. ಅಂದೇ ಗುಣಮಟ್ಟದಲ್ಲಿ ದೂರದೃಷ್ಟಿ ಚಿಂತನೆಗಳೊಂದಿಗೆ ಕಾಮಗಾರಿ ನಡೆಸಿದ್ದರೆ ಇಂದು ಮತ್ತೆ ಮತ್ತೆ ಅದೇ ರಸ್ತೆ ದುರಸ್ತಿಗೆ ಹಣ ವಿನಿಯೋಗಿಸುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಆರೋಪಿಸಿದ ಅವರು, ಮಾಜಿ ಶಾಸಕರಾಗಿ ಜವಬ್ದಾರಿಯುತ ಸ್ಥಾನದಲ್ಲಿರಬೇಕಾದವರು ಪ್ರಬುದ್ದತೆಯಿಂದ ನಡೆದುಕೊಳ್ಳಬೇಕಿದೆ ಎಂದರು. 25 ವರ್ಷಗಳ ರಾಜಕೀಯದಲ್ಲಿ ಅಪ್ಪಚ್ಚುರಂಜನ್ ಅವರು ತಾವು ಮಾಡದ ಹಲವು ಕೆಲಸಗಳಿಗೆ ತಮ್ಮ ಬೆನ್ನು ತಟ್ಟಿಕೊಳ್ಳುತ್ತಿರುವುದು ಹಾಸ್ಯಾಸ್ಪ.ಕಾಂಗ್ರೆಸ್, ಜಿಡಿಎಸ್ ಸಮಿಶ್ರ ಸರ್ಕಾರದ ಅವಧಿಯಲ್ಲಿ ರೂ 300 ಕೋಟಿ ಅನುದಾನವನ್ನು ಕೊಡಗಿನ ರಸ್ತೆ, ತಡೆಗೋಡೆ, ಹೂಳೆತ್ತುವ ಕಾಮಗಾರಿಗಳಿಗೆ ನೀಡಿತ್ತು.ಇದು ನಿಮ್ಮ ಸಾಧನೆಯಲ್ಲ ಇದು ಕಾಂಗ್ರೆಸ್ ನ ಕೊಡುಗೆ.
ಸರಕಾರದ ನೀತಿ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ಆಗಿನ‌ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶ ಮಾಡಿದ್ದರು.ಅದರಂತೆ 2004 ರಲ್ಲಿ ಮೆಡಿಕಲ್ ಕಾಲೇಜು ಮಂಜೂರು ಆಯಿತು.ಆಗ ನೀವು ಶಾಸಕರಾಗಿರಲಿಲ್ಲ.ಪರಾಜಿತ ಅಭ್ಯರ್ಥಿ ಯಾಗಿದ್ರಿ ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಅದೇ ರೀತಿ
ಸರಕಾರ ಪಾಲಿಟೆಕ್ನಿಕ್ ಗಳನ್ನು ಮೇಲ್ದರ್ಜೆಗೇರಿಸಿ ಎಂಜಿನಿಯರಿಂಗ್ ಕಾಲೇಜು ಮಾಡಿತು.ಉಪ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2004 ರಲ್ಲಿ ಕೊಡಗಿಗೆ ಸೈನಿಕ ಶಾಲೆ ಸ್ಥಾಪನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ರು. ಈ ಎಲ್ಲಾ ಸಾಧನೆಗಳನ್ನು ನಾನು ಮಾಡಿದ್ದು ಎಂದು ಹೇಳುವುದು ಸರಿಯಲ್ಲ ಎಂದರು.
ತಮ್ಮ ಆರೋಪಗಳಿಗೆ ಉತ್ತರಿಸಲು
ಮುಕ್ತ ಚರ್ಚೆಗೆ ನಾವು ತಯಾರಿದ್ದೇವೆ ಎಂದ ಅವರು, ಬಿಜೆಪಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಶುಕ್ರವಾರ ಕುಶಾಲನಗರದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲಾ ಯುವ ಕಾಂಗ್ರೆಸ್ ನ ಹಕೀಂ, ಪುರಸಭೆ ಸದಸ್ಯ ಜಿ.ಬಿ.ಜಗದೀಶ್, ಕುಡಾ ಸದಸ್ಯ ಸಜಿ, ಪ್ರಮುಖರಾದ ರಾಜಶೇಖರ್, ಚಿರಂಜೀವಿ, ನಾಗರಾಜು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!