ಕುಶಾಲನಗರ, ಸೆ. 8: ಕೂಡಿಗೆ – ಕುಶಾಲನಗರ ಹೆದ್ದಾರಿಯ ಮರು ಡಾಂಬರೀಕರಣ ಕಾಮಗಾರಿಯು ಕೂಡಿಗೆಯಿಂದ ಆರಂಭಗೊಂಡಿದೆ.
ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಭೂಮಿ ಪೂಜೆ ನೆರವೇರಿಸಿದ್ದರು. ಕಳೆದ ಮೂರು ತಿಂಗಳಿಂದ ಅಧಿಕವಾದ ಮಳೆಯಿಂದಾಗಿ ಕಾಮಗಾರಿ ನಡೆಸಲು ಸಾಧ್ಯವಾಗಿರಲ್ಲಿಲ್ಲಾ. ಇದೀಗ ಮಳೆಯ ಪ್ರಮಾಣವು ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತು ಕೂಡಿಗೆ ಕುಶಾಲನಗರ ರಸ್ತೆಯು ತೀರ ಗುಂಡಿಮಯವಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕಾಮಗಾರಿಯನ್ನು ಆರಂಭಿಸಿರುತ್ತಾರೆ.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅರ್ಬಾಜ್ ಹಾಜರಿದ್ದರು.
Back to top button
error: Content is protected !!