ಸಾಂಸ್ಕೃತಿಕ
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ


ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ವಿದ್ಯಾರ್ಥಿಗಳ ನೃತ್ಯ ಪ್ರಕಾರವನ್ನು ವೀಕ್ಷಿಸಿದ ತೀರ್ಪುಗಾರರು ಇವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ ಮತ್ತು ನೆರೆದಿದ್ದ ಜನರ ಮೈ ರೋಮಾಂಚನ ಗೊಳಿಸುವ ನೃತ್ಯ ಪ್ರಕಾರವನ್ನು ಮಾಡಿದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಶ್ರೀ ರಾಮ ಯುವಕ ಸಂಘದ ಆಯೋಜಕರು, ತೀರ್ಪುಗಾರರು ಹಾಗೂ ಗಣ್ಯರು ನೃತ್ಯ ಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು. ಹಾಗೆಯೇ ವಿಜೇತರಾದ ವಿದ್ಯಾರ್ಥಿಗಳಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಪೋಷಕರು ಮತ್ತು ನೆರೆದಿದ್ದ ಜನರು ಪ್ರೋತ್ಸಾಹಿಸಿ ಅಭಿನಂದಿಸಿದರು.