ಕುಶಾಲನಗರ, ಜೂ 27; ಪಿರಿಯಾಪಟ್ಟಣದ ನಕ್ಷತ್ರ ನೃತ್ಯ ಸಂಸ್ಥೆ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಶಿವಧಾರೆ ನೃತ್ಯ ಸಂಸ್ಥೆಗೆ ತೃತೀಯ ಬಹುಮಾನ ಲಭಿಸಿದೆ.
ಪಿರಿಯಾಪಟ್ಟಣದ ದೇವರಾಜ ಅರಸು ಭವನದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ
ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ವೀರಾಜಪೇಟೆ. ಗೋಣಿಕೊಪ್ಪ, ಕುಶಾಲನಗರ, ಸೇರಿದಂತೆ ನಾನಾ ಕಡೆಗಳಿಂದ ನೃತ್ಯ ಪಟುಗಳು ಭಾಗವಹಿಸಿದ್ದರು. ಸೀನಿಯರ್ಸ್ ಸೋಲೋ, ಸೀನಿಯರ್ ಗ್ರೂಪ್, ಜೂನಿಯರ್ ಸೋಲೋ, ಜೂನಿಯರ್ ಗ್ರೂಪ್, ಸಬ್ ಜೂನಿಯರ್ ಸೋಲೋ, ಸಬ್ ಜೂನಿಯರ್ ಗ್ರೂಪ್ ನೃತ್ಯ ಪ್ರದರ್ಶನ ನಡೆಯಿತು.
ಈ ಪೈಕಿ ಶಿವಧಾರೆ ನೃತ್ಯ ಸಂಸ್ಥೆಗೆ ಸೀನಿಯರ್ ವಿಭಾಗದಲ್ಲಿ ಪ್ರದರ್ಶಿಸಿದ ನೃತ್ಯಕ್ಕೆ ತೃತೀಯ ಬಹುಮಾನ ಲಭ್ಯವಾಗಿದೆ.
ಶಿವಧಾರೆ ನೃತ್ಯ ಸಂಸ್ಥೆಯ ಅದ್ಭುತ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ನ ತರಬೇತುದಾರ ಮಾಸ್ಟರ್ ಚೇತನ್ ರವಿ ಅವರ ನೇತೃತ್ವದಲ್ಲಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ನೃತ್ಯ ಸಂಯೋಜಕರಾದ ಜಗ್ಗು ಮಾಸ್ಟರ್ ಹಾಗೂ ಪ್ರದೀಪ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
Back to top button
error: Content is protected !!