ಕುಶಾಲನಗರ, ಆ 24: ಕುಶಾಲನಗರದ ನಂ 568ನೇ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಎಸ್.ಶಾಂಭಶಿವಯ್ಯ ಅವರ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರು ಸಭೆಯನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಎಸ್.ಶಾಂಭಶಿವಯ್ಯ, ಸಂಘ ಸ್ಥಾಪನೆಯಾಗಿ ಅತ್ಯಲ್ಪ ಅವಧಿಯಲ್ಲಿ ಉತ್ತಮ ಚಟುವಟಿಕೆಗಳನ್ನು ಕೈಗೊಂಡಿದೆ. ಇದು ಸಂಘದ ಎರಡನೇ ವರ್ಷದ ಮಹಾಸಭೆಯಾಗಿದ್ದು 2024-25ನೇ ಸಾಲಿನಲ್ಲಿ ರೂ 57, 663 ಲಾಭಗಳಿಸಿದೆ. ಕುಶಾಲನಗರ, ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ವೀರಶೈವ ಜನಾಂಗಕ್ಕೆ ಒಂದು ಪ್ರತ್ಯೇಕವಾದ ಸಹಕಾರಿ ಸಂಘವನ್ನು ಸ್ಥಾಪಿಸಲು ಜನಾಂಗದ ಸಮಾನ ಮನಸ್ಕರು ಚಿಂತಿಸಿ, ಕುಶಾಲನಗರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ಒಂದು ಸೌಹಾರ್ದ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ಕುಶಾಲನಗರ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಎಂಬ ಶೀರ್ಷಿಕೆ ಅಡಿಯಲ್ಲಿ ನೋಂದಣಿ ಸಂಖ್ಯೆ 568 ರಂತೆ ನೋಂದಾಯಿಸಲಾಗಿದ್ದು ಸದ್ರಿ ಸಂಘವು ತನ್ನ ಅಧಿಕೃತ ಕಾರ್ಯ ಚಟುವಟಿಕೆಯನ್ನು ದಿನಾಂಕ 01-02-2024 ರಿಂದ ಪ್ರಾರಂಭಿಸಿತು.
ಸಂಘದ ಪ್ರಾರಂಭಿಕ ಹಂತದಲ್ಲಿ ಬಂಡವಾಳ ಕೊರತೆಯಿದ್ದ ಕಾರಣ, ಲಭ್ಯವಿರುವ ಬಂಡವಾಳಕ್ಕನುಗುಣವಾಗಿ, ಬೈಲಾ ಅವಕಾಶದಂತೆ ವೈಯಕ್ತಿಕ ಜಾಮೀನು ಸಾಲ, ಗುಂಪು ಸಾಲ, ಪಿಗ್ಮಿ ಸಾಮಾನ್ಯ ಸಾಲ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಡವಾಳಕ್ಕೆ ಅನುಗುಣವಾಗಿ ನೀಡುವ ಸಾಲವನ್ನು ಅರ್ಹತೆ ಆಧಾರದ ಮೇಲೆ ಹೆಚ್ಚು ಮಾಡುವ ಅವಕಾಶವಿರುತ್ತದೆ. ಅಲ್ಲದೆ ಇನ್ನು ವಿವಿದ ರೀತಿಯ ಸಾಲಗಳನ್ನು ನೀಡುವ ಚಿಂತನೆಯಲ್ಲಿದ್ದು, ಎಲ್ಲಾ ಸದಸ್ಯರು ಠೇವಣಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ.
ಸಂಘವು ಸ್ಥಾಪನೆಯಾಗಿ ಅತ್ಯಲ್ಪ ಅವಧಿಯಲ್ಲಿ ಸದಸ್ಯರ ಸಹಕಾರದಿಂದ ವೇಗವಾಗಿ ಬೆಳೆಯುತ್ತಿದ್ದು, ಈವರೆಗೆ ಒಟ್ಟು ರೂ 12,68,76,503 ಕೋಟಿ ವಹಿವಾಟು ನಡೆಸಲಾಗಿದೆ. ಸದಸ್ಯರಿಗೆ ಇನ್ನು ಹೆಚ್ಚಿನ ಸೌಲಭ್ಯವನ್ನು ಒದಗಿಸಲು, ಆಡಳಿತ ಮಂಡಳಿಯು ಉತ್ಸಕವಾಗಿದ್ದು, ಈ ಹಿನ್ನೆಲೆಯಲ್ಲಿ ನೆಫ್ಟ್, ಆರ್.ಟಿ.ಜಿ.ಎಸ್ ಹಾಗೂ ಆರ್.ಟಿ.ಸಿ ಇತರೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಲು ಏರ್ಪಾಡು ಮಾಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಿಂದಿನ ವಾರ್ಷಿಕ ವರದಿ ಓದಿ ಅಂಗೀಕರಿಸಲಾಯಿತು. 2024-25ನೇ ಸಾಲಿನ ಆಡಳಿತ ಮಂಡಳಿ ವರದಿ, ಜಮಾ ಖರ್ಚು ತಖ್ತೆ, ಲಾಭ ನಷ್ಟ ತಖ್ತೆ ಹಾಗೂ ಆಸ್ತಿ ಜವಾಬ್ದಾರಿ ಪರಿಶೀಲಿಸಲಾಯಿತು. 2025-26ನೇ ಸಾಲಿಗೆ ಅಂದಾಜು ಮುಂಗಡ ಪತ್ರ ಹಾಗೂ 2024-25ನೇ ಸಾಲಿನಲ್ಲಿ ಬಜೆಟ್ ಗಿಂತ ಹೆಚ್ಚಿಗೆ ಖರ್ಚಾಗಿರುವುದಕ್ಕೆ ಅನುಮೋದನೆ ಪಡೆಯಲಾಯಿತು. ಸಂಘದ ಬೈಲಾ ತಿದ್ದುಪಡಿ, ಲೆಕ್ಕಪರಿಶೋಧಕರ ನೇಮಕ, ಸಂಘದ ಕಾರ್ಯಾಚರಣೆ ಪುನರ್ ಅವಲೋಕನ, ಇತರೆ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯುವ ಕುರಿತು ಚರ್ಚೆ ನಡೆಯಿತು.
ವೇದಿಕೆಯಲ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್, ನಿರ್ದೇಶಕರಾದ ಹೆಚ್.ವಿ.ಶಿವಪ್ಪ, ಯು.ಎಂ.ಬಸವರಾಜು, ಹೆಚ್.ಎಸ್.ಪುಟ್ಟರಾಜು, ಎಸ್.ಎಸ್.ಸುರೇಶ್, ಮೋಕ್ಷಿಕ್ ಹೊನ್ನಗುಡಿ, ಬಿ.ಎನ್.ಶುಭಶೇಖರ್, ಕೆ.ಡಿ.ಪ್ರಶಾಂತ್, ಜಿ.ಎಸ್.ಯಶೋಧ, ಎ.ಆರ್.ಮಮತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಬಸವಣ್ಣಯ್ಯ ಸೇರಿದಂತೆ ಸಿಬ್ಬಂದಿ ವರ್ಗದವರು, ಸದಸ್ಯರು ಇದ್ದರು.
ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾ ಮಮತಾ ಸ್ವಾಗತಿಸಿದರು, ಮೋಕ್ಷಿಕ್ ರಾಜ್ ವಂದಿಸಿದರು.
Back to top button
error: Content is protected !!