ಚುನಾವಣೆ

ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಸುನಿಲ್ ರಾವ್

ಕುಶಾಲನಗರ, ಜ 19: ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಸುನಿಲ್ ರಾವ್ ಉಪಾಧ್ಯಕ್ಷರಾಗಿ ತಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರು. ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ತಿನಿಸುವ ಮುಖಾಂತರ ಅಭಿನಂದಿಸಿದರು. ಚುನಾವಣಾ ಅಧಿಕಾರಿಯಾಗಿ ಪಿ ಬಿ ಮೋಹನ್ ಅವರು ಕಾರ್ಯನಿರ್ವಹಿಸಿದರು.
 ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್. ಆರ್. ಸುನಿಲ್ ರಾವ್ , ಮುಂಬರುವ ದಿನಗಳಲ್ಲಿ ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಗ್ರಾಮೀಣ ಜನತೆಗೆ ಅನುಕೂಲ ಒದಗಿಸುವುದರೊಂದಿಗೆ ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಎಲ್ಲರ ಮಾರ್ಗದರ್ಶನ ಸಲಹೆಗಳನ್ನು ಪಡೆದು ಸಂಘವನ್ನು ನಡೆಸಿಕೊಂಡು ಹೋಗುವ ಜೊತೆಗೆ ಹೆಚ್ಚು ಅನುದಾನ ತಂದು ರೈತರಿಗೆ ಮತ್ತಷ್ಟು ಅನುಕೂಲ ಒದಗಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕರಾದ ವೆಂಕಟಯ್ಯ ನಾಯಕ, ಎಚ್ ಆರ್ ಕೃಷ್ಣ, ಸುರೇಶ್ ವಿ ಪಿ, ವಸಂತ ಬಿ.ಎ, ಮಂಜುಳಾ, ಗಾಯತ್ರಿ ಕೆ.ಕೆ. ಚಂದ್ರಿಕಾ, ದೇವಿರಮ್ಮ, ಗಿರಿಜಾ ವೈ.ಆರ್  ಹಾಗೂ ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಸದ್ಯಸ ಕೆ.ಎಸ್. ಶಿವಕುಮಾರ್, ಅರುಣ್ ಮಾದಪ್ಪ ಬಾಪು. ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!