ಕುಶಾಲನಗರ, ಆ 22: ಕೊಡಗಿನ ಅತೀ ಹಿರಿಯ ಇತಿಹಾಸವುಳ್ಳ ಕೆಲವೆ ಸರಕಾರಿ ಶೈಕ್ಷಣಿಕ ಸಂಸ್ಥೆಯಾದ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಾಮಿಕ ಶಾಲೆಯ ಶತಮಾನೋತ್ಸವದ ದಿನಗಳು ಹತ್ತಿರ ಬರುತ್ತಿದ್ದು, ಈ ಶತಮಾನೋತ್ಸವದ ಸವಿನೆನಪಿಗಾಗಿ ಸುಮಾರು 8 ಕೋಟಿ ಅಂದಾಜು ವೆಚ್ಚದ ಭವನವೊಂದನ್ನು ಎಲ್ಲಾ ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘವು ಯೋಜನೆ ಯನ್ನು ರೂಪುಗೊಳಿಸಿದ್ದು,ಈ ಸಂಘದ ಪದಾಧಿಕಾರಿಗಳು ಅಧ್ಯಕ್ಷರಾದ ಕೊಡಗು ಜಿಲ್ಲಾ ಮಾಜಿ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ನೇತ್ರತ್ವದಲ್ಲಿ ನಿಯೋಗ ತೆರಳಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿಯಾಗಿ, ಜನರಲ್ ಕಾರ್ಯಪ್ಪನವರು ಹಾಗು ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ರವರು ಓದಿದ ಈ ಶಾಲೆಯ ಶತಮಾನೋತ್ಸವ ಭವನಕ್ಕೆ ಸಹಕಾರ ನೀಡಬೇಕೆಂದು ಮನವಿ ಸಲ್ಲಿಸಿತು.
ವಿಧಾನ ಸಭೆಯ ಅಧಿವೇಶನದ ಒತ್ತಡದ ಮಧ್ಯೆಯು ನಿಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸಿದ ಶಾಸಕ ಡಾ, ಮಂತರ್ ಗೌಡ ರವರ ಕೋರಿಕೆಗೆ ಸಹಕಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು,ಇದಕ್ಕು ಮೊದಲು ಶಾಸಕ ಡಾ, ಮಂತರ್ ಗೌಡ ರವರ ನೇತ್ರತ್ವದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರನ್ನು ಬೇಟಿಯಾಗಿ ನಿಮ್ಮ ತಂದೆಯವರು ಓದಿದ ನಿಮ್ಮೂರ ಶಾಲೆಗೆ ಸಹಕರಿಸುವಂತೆ ಮನವಿ ಮಾಡಲಾಯಿತು,ಈ ಸಂದರ್ಭದಲ್ಲಿ ಶಾಸಕ ಮಂತರ್ ಗೌಡ ರೊಂದಿಗೆ ತೆರಳಿ ಮುಖ್ಯಮಂತ್ರಿಗಳ ಕಾನೂನು ಸಲಹೆ ಗಾರರಾದ ಅಜ್ಜಿ ಕುಟೀರ ಪೊನ್ನಣ್ಣ ರವರನ್ನು ಸಹಕಾರ ಕೋರಲಾಯಿತು, ವಿ ಪಿ ಶಶಿಧರ್ ನೇತ್ರತ್ವದ ತಂಡದೊಂದಿಗೆ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ ಪಿ ಚಂದ್ರಕಲಾ, ಪದಾಧಿಕಾರಿಗಳಾದ ಎಂ ವಿ ನಾರಾಯಣ,ಎಂಕೆ ದಿನೇಶ್,ಹಿರಿಯ ವಕೀಲರಾದ ನಾಗೇಂದ್ರ ಬಾಬು,ವಿ ಎಸ್ ಆನಂದ,ಎಂ ವಿ ಮೋಯ್ದಿನ್,ಉಮಾಶಂಕರ್ ಬಿ ಎಸ್ ಲೋಕೇಶ್ ಸಾಗರ್,ಹೆಚ್ ಟಿ ವಸಂತ,ದೇವರಾಜ್, ಶಾಜಿ ಜಾರ್ಜ್ ಡಿ ವಿ ರಾಜೇಶ್,ಚಂದನ್ ಕುಮಾರ್,ರವಿಕುಮಾರ್,ಸೇರಿದಂತೆ ಹಿರಿಯ ವಿಧ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು
Back to top button
error: Content is protected !!