ಕಾರ್ಯಕ್ರಮ

ಚಿಕ್ಕ ಅಳುವಾರದಲ್ಲಿ ಜನಿವಾರ ಹಬ್ಬಾಚರಣೆ

ಕುಶಾಲನಗರ, ಆ 09: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಾಂಗ ಸಂಘದ ವತಿಯಿಂದ ನೂಲ ಹುಣ್ಣಿಮೆಯ ಅಂಗವಾಗಿ ಜನಿವಾರ ಹಬ್ಬ ಆಚರಣೆಯು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರಧ್ಧಾಭಕ್ತಿಯಿಂದ ನೆರವೇರಿತು.
ಅಳವಾರದಮ್ಮನ ದೇವಸ್ಥಾನದಿಂದ ಮಹಿಳೆಯರು ಮತ್ತು ಪುರುಷರು ಸೇರಿ ಪಂಚ ಕಳಸ ದೊಂದಿಗೆ ಮಂಗಳವಾದ್ಯ ಸಮೇತವಾಗಿ ಹುಣ್ಣಿಮೆಯ ಪೂಜಾ ಕಾರ್ಯಕ್ರಮ ಅಯೋಜಿತ ಸ್ಧಳಕ್ಕೆ ಬಂದು ಸ್ಧಳದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ನಂತರ ಸಂಘದ ಎಲ್ಲಾ ಸದಸ್ಯರು ರಕ್ಷಾಬಂಧನದೊಂದಿಗೆ ಜನಿವಾರವನ್ನು ಧರಿಸಿಕೊಳ್ಳುವ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಡಿ.ಆರ್.ಪ್ರೇಮ್ ಕುಮಾರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಸಹಕಾರ ಸಂಘದ ಉಪಾಧ್ಯಕ್ಷೆ ಗೌರಮಣಿ, ಸದಸ್ಯರಾದ ಮಹದೇವ, ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ ಸೇರಿದಂತೆ ಸಂಘದ ನಿರ್ದೇಶಕರು, ಹಾಗೂ ನೂರಾರು ಕುಲಭಾಂಧವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!