ಕುಶಾಲನಗರ, ಆ 03: ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಮುಂದಾಳತ್ವದಲ್ಲಿ ಸಮುದಾಯದ ಮುಂಚೂಣಿ ನಾಯಕ ಎಂ ಎಲ್ ಸಿ .ಬಿ ಕೆ. ಹರಿಪ್ರಸಾದ್ ಅವರನ್ನು ಕುಶಾಲನಗರದಲ್ಲಿ ಭೇಟಿ ಮಾಡಲಾಯಿತು.
ಸಂಘಟನೆ ಕುರಿತು ಸಮಾಜದ ಪ್ರಮುಖರು ಹರಿ ಪ್ರಸಾದ್ ಅವರೊಂದಿಗೆ ಚರ್ಚಿಸಿದರು.
ಸಮಾಜದ ಕಟ್ಟಡಕ್ಕೆ ಸ್ಥಳ ಮಂಜೂರು ಮಾಡಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸಹಕರಿಸಲು ಪ್ರಮುಖರು ವಿನಂತಿಸಿಕೊಂಡರು
ಇದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ಅವರು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವಿಷಯವನ್ನು ಮಂಡಿಸಿ ಚರ್ಚಿಸುತ್ತೇನೆ ಎಂದು ಭರವಸೆಯನ್ನು ನೀಡಿದರು.
Back to top button
error: Content is protected !!