ಪರಿಸರ

ಅಪಾಯಕಾರಿ ಮರಗಳ ರೆಂಬೆ ತೆರವಿಗೆ ಪುರಸಭೆಯಿಂದ ಅರಣ್ಯ ಇಲಾಖೆಗೆ ಪತ್ರ

ಕುಶಾಲನಗರ, ಜು 19: ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ KSRTC ಬಸ್ ಸ್ಟಾಂಡ್ ಮುಂಭಾಗ, ಸರ್ಕಾರಿ ಪಾಲಿಟೆಕ್ನಿಕ್ ಮುಂಭಾಗದ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಈ ಮರದ ಕೊಂಬೆ-ರೆಂಬೆಗಳು ಗಾಳಿ-ಮಳೆಗೆ ಬಿದ್ದು ಮರಗಳ ಕೆಳಗೆ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಪ್ರಾಣ ಹಾನಿ ಆಗುವ ಸಂಭವವಿರುತ್ತದೆ. ಆದ್ದರಿಂದ ಈ ಮರದ ರೆಂಬೆ-ಕೊಂಬೆಗಳನ್ನು ಕಡಿಯುವಂತೆ ಹಾಗೂ ಕಾವೇರಿ ಹೊಳೆ ಬದಿಯಲ್ಲಿ ಅನೇಕ ಮರಗಳು ರೆಂಬೆಗಳು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದ್ದು ಮರದ ರೆಂಬೆಗಳನ್ನು ಕಡಿಸುವಂತೆಯೂ ಹಾಗೂ ಬಸವೇಶ್ವರ ಬಡಾವಣೆಯ ಗೋವಿಂದಪ್ಪರವರ ಮನೆ ಬಳಿ ಒಂದು ಮರವು ರಸ್ತೆಯ ಮಧ್ಯದಲ್ಲಿ ಇದ್ದು ಇದರಿಂದ ರಸ್ತೆಯ ಅಭಿವೃದ್ಧಿಗೆ ಅಡಚಣೆ ಆಗುತ್ತಿರುವುದರಿಂದ ಮರವನ್ನು ತೆರವುಗೊಳಿಸುವಂತೆ ತೀರ್ಮಾನಿಸಲಾಗಿದೆ. ಆದ್ದರಿಂದ ಮೇಲೆ ವಿವರಿಸಿರುವ ಜಾಗದಲ್ಲಿರುವ ಮರದ ರೆಂಬೆ ಕೊಂಬೆಗಳನ್ನು ತಮ್ಮ ಈ ಇಲಾಖಾ ವತಿಯಿಂದ ಕಡಿದು ಮುಂದೆ ಸಂಭವಿಸುವ ಪ್ರಾಣಹಾನಿಯನ್ನು ತಡೆ ಗಟ್ಟಬೇಕಾಗಿ ಕುಶಾಲನಗರ ಪುರಸಭೆ ಮೂಲಕ ವಲಯ ಅರಣ್ಯಾಧಿಕಾರಿ ಕಛೇರಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಪಾಯಕಾರಿ ಮರಗಳ ಬಗ್ಗೆ ಕಾಂಗ್ರೆಸ್ ಮುಖಂಡ ಸಿ.ಎಂ. ಅಜೀಜ್ ಅವರು ಪುರಸಭೆ ಅಧ್ಯಕ್ಷರು,‌ಮುಖ್ಯಾಧಿಕಾರಿಯಾದಿಯಾಗಿ  ಸದಸ್ಯರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪುರಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆ ಕೂಡಲೆ ಈ ಬಗ್ಗೆ ಕ್ರಮವಹಿಸಲು ಅಜೀಜ್ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!