ಅಪಘಾತ

ಅರಂತೋಡು ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತ: ನಂಜರಾಯಪಟ್ಟಣದ ಮಹಿಳೆ ದುರ್ಮರಣ

ಕುಶಾಲನಗರ ಜೂ 25: ಅರಂತೋಡು ಬಳಿ ಕೆ ಎಸ್ ರ್ ಟಿ ಸಿ ಬಸ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕುಶಾಲನಗರ ಮೂಲದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಂತೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮಧ್ಯೆ ಅಪಘಾತ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕುಶಾಲನಗರ ಮೂಲದ ಮಹಿಳೆ ಭೋಜಮ್ಮ @ ಭಾರತಿ (58) ಮೃತಪಟ್ಟಿದ್ದಾರೆ. ಮೃತರು ಕುಶಾಲನಗರ ಸಮೀಪದ ರಂಗಸಮುದ್ರ ( ವಿರೂಪಾಕ್ಷಪುರದ ನಿವಾಸಿ ದಿವಂಗತ ಕುದುಕುಳಿ ಲೋಕೇಶ್ ರವರ ಧರ್ಮಪತ್ನಿ. ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಸುಳ್ಯ ಕೆವಿಜಿ ಮೆಡಿಕಲ್‌ ಕಾಲೇಜು ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳುಗಳ ಕೆಲವರ ಸ್ಥಿತಿ ಗಂಭೀರವಾಗಿದೆ. ಅರಂತೋಡು ಸಮೀಪ ತಿರುವಿನಲ್ಲಿ ಬಸ್‌‌ಗಳ ಮಧ್ಯೆ ಅಪಘಾತ ಸಂಭವಿಸಿದ್ದು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!