ಕುಶಾಲನಗರ, ಜೂ 25:ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮ ನಿವಾಸಿ ಪರಶಿವಮೂರ್ತಿ ಎಂಬವರು ಅಕ್ಟೋಬರ್-2024 ನೇ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬಕ್ನಲ್ಲಿ ಯಾರೋ ಒಬ್ಬರಿಗೆ ಮೇಸೆಜ್/ಕಮೆಂಟ್ ಮಾಡಿದ್ದು, ಅಪರಿಚಿತ ವ್ಯಕ್ತಿಯು ದಿನಾಂಕ: 02-11-2024 ರಂದು ಸದರಿಯವರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಪಿರಿಯಾಪಟ್ಟಣ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡು ನೀವು ಹುಡುಗಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೆಜ್/ಕಮೆಂಟ್ ಮಾಡಿ ಟಾರ್ಚರ್ ನೀಡಿರುವ ಕುರಿತು ದೂರು ದಾಖಲಾಗಿರುತ್ತದೆ. ನೀವು ಹಣವನ್ನು ನೀಡಿದರೆ ಸರಿ ಮಾಡುತ್ತೇನೆ ಇಲ್ಲವಾದಲ್ಲಿ ಮನೆಯ ಬಳಿ ಬಂದು ಕರೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇನೆ ಹಾಗೂ ಅಕ್ಕ-ಪಕ್ಕದವರ ಮನೆಯ ಮುಂದೆ ನಿನ್ನ ಮಾನಮರ್ಯಾದೆ ಹೋಗುವಂತೆ ಮಾಡುತ್ತೇನೆ ಎಂದು ಹಲವು ಬಾರಿ ಮೊಬೈಲ್ ಗೆ ಕರೆ ಮಾಡಿ ಹೆದರಿಸಿ ಸುಮಾರು ರೂ.7/- ಲಕ್ಷಗಳ ಹಣವನ್ನು ಪಡೆದಿದ್ದು, ಸದರಿಯವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಿನಾಂಕ: 11-01-2025 ರಂದು ದೂರು ಸ್ವೀಕರಿಸಿದ್ದು, ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ: 318(2), 319(1), 308(2) ಬಿಎನ್ ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಗಾಗಿ ಪಿ.ಚಂದ್ರಶೇಖರ್, ಡಿಎಸ್ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್ ಬಿ.ಜಿ, ಪಿಐ, ಮತ್ತು ಗೀತಾ, ಪಿಎಸ್ಐ, ಕುಶಾಲನಗರ ಟೌನ್ ಪೊಲೀಸ್ ಠಾಣೆ ಹಾಗೂ ರಾಣಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 24-06-2025 ರಂದು ಈ ಕೆಳಗಿನ 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ:
1. ಇಬ್ರಾಹಿಂ ಬಾದ್ ಷಾ. (25 ವರ್ಷ) ಹಾಲೇರಿ ಗ್ರಾಮ, ಬೋಯಿಕೇರಿ, ಮಡಿಕೇರಿ ತಾ.
2. ರಾಘವೇಂದ್ರ ಬಿ.ಎಂ. (19 ವರ್ಷ), ಬಳಿಘಟ್ಟ ಗ್ರಾಮ, ಮೇಲುಕೋಟೆ, ಪಾಂಡವಪುರ ತಾ.
3. ಸಂಗೀತಾ_ ಗಂಡ: ಇಬ್ರಾಹಿಂ ಬಾದ್ ಷಾ. (30 ವರ್ಷ), ಬನಶಂಕರಿ, ಬೆಂಗಳೂರು.
4. ಚರಣ್ ಸಿ.ಕೆ, 19 ವರ್ಷ, ಆದರ್ಶ ದ್ರಾವಿಡ ಕಾಲೋನಿ, ಕುಶಾಲನಗರ.
5. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ
ವತಪಡಿಸಿಕೊಂಡ ಸ್ವತ್ತುಗಳ ವಿವರ; 04 ಮೊಬೈಲ್ ಗಳು.
Back to top button
error: Content is protected !!