ಕುಶಾಲನಗರ, ಜೂ 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷಗೊಂಡು ಆತಂಕ ಸೃಷ್ಠಿಸಿದೆ.
ಶನಿವಾರ ರಾತ್ರಿ ಹುದುಗೂರು ಗ್ರಾಮಕ್ಕೆ ಬಂದಿರುವ ಕಾಡಾನೆ ಮನೆ ಅಂಗಳದಲ್ಲಿ ಬೆಳೆದ ಬಾಳೆಯನ್ನು ತಿಂದು ಬೆಳ್ಳಂಬೆಳಗ್ಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಡ್ಡಾಡಿದೆ. ಈ ಸಂದರ್ಭ ಗ್ರಾಮಸ್ಥರು ಚೀರಾಡಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ.
ಬೆಳ್ಳಂಬೆಳಗ್ಗೆ ಪ್ರತ್ಯಕ್ಷಗೊಂಡ ಕಾಡಾನೆಯಿಂದ ಈ ಭಾಗದ ರೈತರು ತಮ್ಮ ಜಮೀನಿನತ್ತ ತೆರಳಲು, ಬಸ್ ಗಾಗಿ ಮುಖ್ಯ ರಸ್ತೆಯ ಮೂಲಕ ತಂಗುದಾಣ ಕ್ಕೆ ಬರುವ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಯಭೀತರಾಗಿರುತ್ತಾರೆ.
Back to top button
error: Content is protected !!