ಮಳೆ

ಕೂಡುಮಂಗಳೂರು ಆನೆಕೆರೆ ನೀರು ಪೋಲು: ಪರಿಶೀಲನೆ ನಡೆಸಿದ ಜನಪ್ರತಿನಿಧಿ, ಅಧಿಕಾರಿಗಳು

ಕುಶಾಲನಗರ ಮೇ 27: ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರಿನ ಆನೆಕೆರೆಯ ಏರಿಯ ಕೆಳಭಾಗದಲ್ಲಿ ರಂದ್ರ ಉಂಟಾಗಿ ಕೆರೆ ನೀರೆಲ್ಲ ಪೋಲಾಗುತ್ತಿದ್ದ ಪರಿಣಾಮ ಸ್ಥಳಕ್ಕೆ ಕೂಡುಮಂಗಳೂರು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯ ದಿನೇಶ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ್ ಮತ್ತು ಕೀರ್ತನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾತನಾಡಿದ ಅಧ್ಯಕ್ಷ ಭಾಸ್ಕರ್ ನಾಯಕ್, ಮಳೆಗಾಲದಲ್ಲಿ ಮಳೆ ನೀರನ್ನು ಶೇಖರಣೆ ಮಾಡಿದರೆ ಮಾತ್ರ ಬೇಸಿಗೆ ಕಾಲದಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ಎದುರಿಸಲು ಸಾಧ್ಯ. ಆ ನಿಟ್ಟಿನಲ್ಲಿ ಆನೆಕೆರೆಗೆ ಹೆಚ್ಚಿನ ನೀರು ಶೇಖರಣೆಯಾಗುತ್ತಿದ್ದು ಕೆರೆಯ ಏರಿಯ ಕೆಳಭಾಗದಲ್ಲಿ ರಂದ್ರ ಉಂಟಾಗಿ ಕೆರೆಗೆ ತುಂಬಿದ ನೀರೆಲ್ಲ ಪೋಲಾಗುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳೊಂದಿಗೆ ಬಂದು ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!