ಕ್ರೀಡೆ

ಕುಶಾಲನಗರದಲ್ಲಿ ಇಂದು ಸಂಜೆಯಿಂದ *ಬಿಜಿಎಸ್ ಕಪ್* ರಾಜ್ಯಮಟ್ಟದ ಕಬಡ್ಡಿ ಹಬ್ಬ

ಕುಶಾಲನಗರ, ಮೇ 12: ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಮೇ 13 14 ಮತ್ತು 15 ರಂದು ನಡೆಯುವ ಹೊನಲು ಬೆಳಕಿನ ರಾಜ್ಯಮಟ್ಟದ ಕಬ್ಬಡಿ ಹಬ್ಬಕ್ಕೆ ಕುಶಾಲನಗರದ‌ ಜಿಎಂಪಿ ಶಾಲಾ ಮೈದಾನ ಸಜ್ಜಾಗಿದೆ. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಲಿದ್ದು ಪ್ರೊ ಕಬ್ಬಡಿಯಲ್ಲಿ ಪಾಲ್ಗೊಂಡ ಆಟಗಾರರು ಭಾಗಿಯಾಗಲಿದ್ದಾರೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಶಾಸಕರಾದ ಡಾ. ಮಂತರ್ ಗೌಡ, ಹರೀಶ್ ಗೌಡ, ನಿಖಿಲ್ ಕುಮಾರಸ್ವಾಮಿ, ಸಿ.ಎನ್ ಬಾಲಕೃಷ್ಣ, ಸೂರಜ್ ರೇವಣ್ಣ, ಸಿ.ಟಿ ರವಿ, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಸೇರಿದಂತೆ ಇನ್ನುಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಇಂದು
(ಬುಧವಾರ) ಸಂಜೆ 4 ಗಂಟೆಗೆ ಬೈಚನಹಳ್ಳಿ ಮಾರಮ್ಮ ದೇವಾಲಯದಿಂದ ಬೃಹತ್ ಮೆರವಣಿಗೆ ನಡೆಯಲಿದ್ದು ಸಂಜೆ 6 ಗಂಟೆಗೆ ಕ್ರೀಡಾಕೂಟ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ. ವೇದಿಕೆ ಪದಾಧಿಕಾರಿಗಳು ಮೈದಾನ, ವೇದಿಕೆ ಹಾಗೂ ಕಾರ್ಯಕ್ರಮ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!