ಆರೋಪ

ಸೋಮವಾರದಂದು ವಿಧಾನಸೌಧ ಛಲೋ ಚಳುವಳಿ

ಕುಶಾಲನಗರ, ಜು 21: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ನೇತೃತ್ವದಲ್ಲಿ 22/7/2024 ಸೋಮವಾರದಂದು ವಿಧಾನಸೌಧ ಛಲೋ ಚಳುವಳಿಯನ್ನ ಬೆಂಗಳೂರಿನಲ್ಲಿ ಮಾಡಲಾಗುವುದು ಎಂದು ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ HJ ಹೇಳಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ರೈತರ ಕುಂದು ಕೊರತೆಗಳನ್ನು ಆಲಿಸದೆ . ತಮ್ಮ ಮನಸೋ ಇಚ್ಛೆ . ಜನತೆಯಿಂದ ಗೆದ್ದ ರಾಜಕಾರಣಿಗಳು. ರೈತರ ಬೇಡಿಕೆಗಳು ಮತ್ತು ಅತಿ ಹೆಚ್ಚು ಮಳೆ ಇಂದ ಆದಂತಹ ಜಿಲ್ಲೆಗಳ ಸ್ಥಳ ಪರಿಶೀಲನೆ ಮಾಡಿ ರೈತರಿಗೆ ಮತ್ತೆ ಜನರಿಗೆ ಆದಂತಹ ಕಷ್ಟಗಳಿಗೆ ನೆರವಾಗದೆ ಬದಲು. ಬೇಡವಾದ ವಿಚಾರಗಳನ್ನು ವಿಧಾನಸಭೆಯ ದೇವಾಲಯದಲ್ಲಿ ಡೊಂಬರಾಟ ನಡೆಸುತ್ತಿದ್ದಾರೆ. ಎಂದು ಶರತ್ ಕುಮಾರ್ ಆರೋಪಿಸಿದ್ದಾರೆ

ಕೊಡಗು ಮತ್ತು ಮೈಸೂರು ಜಿಲ್ಲೆ ಸಂಚಾಲಕಡಾ ಅರುಣ್ ಕುಮಾರ್ ಮಾತಾಡಿ ಮಳೆ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಆದಂತಹ ಅನಾಹುತಗಳನ್ನು ಪರಿಶೀಲನೆ ಮಾಡಿ ರೈತರಿಗೆ ಪರಿಹಾರವನ್ನು ಕೊಡಬೇಕು ಮತ್ತುಮೈಸೂರು.ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ರೈತರಿಗೆ ಆಗಿರುವ ನಷ್ಟವನ್ನು ಕೊಡಬೇಕು. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆ ಮತ್ತೆ ಮಾನವ ಸಂಘರ್ಷವನ್ನು ಕಟ್ಟು ನಿಟ್ಟಾಗಿ ತಡೆಯಬೇಕು. ಕೊಡಗಿನಲ್ಲಿ ಸರ್ಕಾರದ ಭೂಮಿಯನ್ನು ಒತ್ತುವರಿಯನ್ನು ತೆರೆವು ಗೊಳಿಸಬೇಕು .ಬಹುಕರ್ ಸಾಗುವಳಿಯನ್ನು ಪ್ರತಿಯೊಬ್ಬ ರೈತನಿಗೆ ಕೊಡಬೇಕು ಹಾಗಾಗಿ ಇಡೀ ರಾಜ್ಯಾದ್ಯಂತ ನಮ್ಮ ರೈತ ಸಂಘಟನೆ ವಿಧಾನಸೌಧ ಮುತ್ತಿಗೆ ಚಳುವಳಿಯನ್ನು ಆರಂಭಿಸಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಕೊಡಗು ಗೌರವಾಧ್ಯಕ್ಷ ಚಂದ್ರಣ್ಣ. ಉಪಾಧ್ಯಕ್ಷ ಪ್ರಸನ್ನ ರೆಡ್ಡಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ. ತಾಲೂಕು ಸಂಘಟನಾ ಕಾರ್ಯದರ್ಶಿ ತೊರೆನೂರು. ಅರುಣ. ತೊರೆನೂರು ಘಟಕದ ಅಧ್ಯಕ್ಷ ಅಮೃತ್. ಹೆಬ್ಬಾಲೆ ಘಟಕದ ಅಧ್ಯಕ್ಷ ಬಾಂಬೆಪುಟ್ಟ. ಹುಲಸೆ ಘಟಕದ ಅಧ್ಯಕ್ಷ ದಿನೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!