ಕಾಮಗಾರಿ

ನಂಜರಾಯಪಟ್ಟಣದಲ್ಲಿ ವಿವಿಧ ಅಭಿವೃದ್ದಿಗೆ ಕಾಮಗಾರಿಗಳಿಗೆ ಭೂಮಿಪೂಜೆ

ಕುಶಾಲನಗರ, ಜು 05: ನಂಜರಾಯಪಟ್ಟಣ ಗ್ರಾಮದಲ್ಲಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ನಂಜರಾಯಪಟ್ಟಣ ಗ್ರಾಮದ
ಗುಳಿಗ ಪೈಸಾರಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಸಾಂಕೇತಿಕವಾಗಿ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಈ ಸಾಲಿನ ಕ್ರಿಯಾಯೋಜನೆಯಂತೆ
ನಂಜರಾಯಪಟ್ಟಣ ಗ್ರಾಮ ವ್ಯಾಪ್ತಿಯಲ್ಲಿ ರೂ 40 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಗ್ರಾಮದಲ್ಲೂ ಕೂಡ ರೂ 40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಅವಧಿಯಲ್ಲಿ ಈವರೆಗೆ ಒಟ್ಟು 5 ಕೋಟಿ ವೆಚ್ಚದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ವರ್ಗದವರಿಗೂ ಕೂಡ ಪಂಚಾಯಿತಿ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಿರುವ ಸಾರ್ಥಕತೆ ನಮ್ಮ ಆಡಳಿತ ಮಂಡಳಿಗಿದೆ ಎಂದು ತಿಳಿಸಿದರು.

ಇದೇ ಸಂದರ್ಭ
ವಸತಿ ಯೋಜನೆಗೆ ಸಂಬಂಧಿಸಿದಂತೆ
ಸರಕಾರದ ಹೊಸ ನಿಯಮದಿಂದ ಉಂಟಾಗುವ ಬಾಧಕಗಳ‌ ಕುರಿತು ಅವರು ಗ್ರಾಮಸ್ಥರ ಗಮನಕ್ಕೆ ತಂದರು.

ಗ್ರಾಮೀಣ ಭಾಗದ ಕಡು ಬಡವರು, ಬಡವರು, ಕೂಲಿ ಕಾರ್ಮಿಕರು, ದುರ್ಬಲರು ಹಾಗೂ ವಸತಿ ರಹಿತ ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳುವ ಸಂದರ್ಭ ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಸ್ವಂತ ಸೂರು ಹೊಂದಬೇಕೆನ್ನುವ ಬಡವರ ಕನಸು ಕನಸಾಗಿಯೇ ಉಳಿಯಲಿದೆ. ಆದ್ದರಿಂದ ಸರಕಾರ ಗ್ರಾಮೀಣ ಜನರ ಹಿತದೃಷ್ಟಿಯಿಂದ ನಿಯಮಕ್ಕೆ ತಿದ್ದುಪಡಿ ತಂದು ಗ್ರಾಪಂ ವ್ಯಾಪ್ತಿಗೆ ಸರಳ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಸರಕಾರ ನಿಯಮಗಳನ್ನು ಸಡಿಲಿಸದಿದ್ದರೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೋರಾಟ ರೂಪಿಸಲಾಗುವುದು. ಈ ಸಂಬಂಧ ಶಾಸಕರು ಹಾಗೂ ಸಂಸದರು ಕ್ರಮವಹಿಸುವಂತೆ ಅವರು ಆಗ್ರಹಿಸಿದರು.

ಈ ಸಂದರ್ಭ ಗ್ರಾಪಂ
ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಸಮೀರಾ, ಪಿಡಿಒ ರಾಜಶೇಖರ್, ಮಾಜಿ ಸದಸ್ಯೆ ಚಂದ್ರಾವತಿ, ಗ್ರಾಮಸ್ಥರಾದ
ಕೇಶವ, ಉಮಾವತಿ, ಸೌಮ್ಯ, ಗುತ್ತಿಗೆದಾರ ಫಯಾಜ್, ಸಿಬ್ಬಂದಿ ರಂಜಿತ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!