ಕ್ರೈಂ

ಕುಶಾಲನಗರ ಮಸೀದಿಯಲ್ಲಿ‌ ಕಳ್ಳತನ: ಆರೋಪಿ ಬಂಧನ

ಕುಶಾಲನಗರ, ಜ 06: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 19-12-2024 ಇಂದಿರಾ ಬಡಾವಣೆಯಲ್ಲಿರುವ ಮಸೀದಿಯ ಒಳಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ ವರ್ಧಕಕ್ಕೆ ಅಳವಡಿಸುವ ಆಂಪ್ಲಿಫೈರ್ ಹಾಗೂ ಅದರ ಉಪಕರಣವನ್ನು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು, ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿ/ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳ ಪತ್ತೆಯ ಸಲುವಾಗಿ ಶ್ರೀ ಆರ್.ವಿ.ಗಂಗಾಧರಪ್ಪ, ಡಿಎಪಿ. ಸೋಮವಾರಪೇಟೆ ಉಪವಿಭಾಗ, ಶ್ರೀ ಪ್ರಕಾಶ್.ಬಿ.ಜಿ, ಪಿಐ & ಶ್ರೀಮತಿ ಗೀತಾ, ಪಿಎಸ್‌ಐ ಕುಶಾಲನಗರ ಟೌನ್ ಪೊಲೀಸ್ ಠಾಣೆ, ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-01-2025 ರಂದು ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿಯಾದ ಮಹಮ್ಮದ್ ಶೋಯಬ್, 32 ವರ್ಷ ಎಂಬಾತನನ್ನು ದಸ್ತಗಿರಿ. ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ಸದರಿ ಪ್ರಕರಣದಲ್ಲಿ ಕಳ್ಳತನವಾಗಿದ್ದ ಧ್ವನಿ ವರ್ಧಕಕ್ಕೆ ಅಳವಡಿಸುವ ಒಂದು ಆಂಪ್ಲಿಫೈರ್ ಮತ್ತು ಅದರ ಸಲಕಲರಣೆಗಳು ಹಾಗೂ ರೂ. 3000/- ನಗದನ್ನು ವಶಪಡಿಕೊಳ್ಳಲಾಗಿರುತ್ತದೆ.

ಸದರಿ ಆರೋಪಿಯು ಮಡಿಕೇರಿ ಹಾಗೂ ಪಿರಿಯಾಪಟ್ಟಣದ ಮಸೀದಿಗಳಲ್ಲಿ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ. ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯ ಮಸೀದಿಯೊಂದರಲ್ಲಿ ಕಳ್ಳತನ ಮಾಡಿದ್ದ, 2 ಆಂಪ್ಲಿಫೈರ್‌ಗಳು, ಡಿಜಿಟಲ್ ಎಕೋ ರಿವರ್ ಮಿಕ್ಸರ್ & ಮಾನಿಟರ್ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯೊಂದರಿಂದ ಕಳ್ಳತನ ಮಾಡಿದ ಒಂದು ಆಂಪ್ಲಿಫೈರ್, ಸೌಂಡ್ ಮಿಕ್ಸರ್ ಉಪಕರಣಗಳನ್ನು ಮತ್ತು ಆರೋಪಿಯು ಕೃತ್ಯಕ್ಕೆ ಬಳಸಿದ 2 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!