ಕಾರ್ಯಕ್ರಮ

ಸುತ್ತೂರು ಜಾತ್ರೋತ್ಸವದ ಪ್ರಚಾರ ರಥಕ್ಕೆ ಕುಶಾಲನಗರದಲ್ಲಿ‌ ಸ್ವಾಗತ

ಕುಶಾಲನಗರ, ಜ 04:ಸುತ್ತೂರು ಮಹಾ ಸಂಸ್ಥಾನದಲ್ಲಿ ಜನವರಿ 26 ರಿಂದ ಫೆ 1 ರವರೆಗೆ ಹಮ್ಮಿಕೊಂಡಿರುವ ಸುತ್ತೂರು ಜಾತ್ರೋತ್ಸವದ ಬಗ್ಗೆ ಪ್ರಚುರ ಪಡಿಸಲು ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥಕ್ಕೆ ಕುಶಾಲನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ರಥದಲ್ಲಿನ ಶ್ರೀ ಶಿವರಾತ್ರೀಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಹಾಗೂ ದೇಶಕ್ಕೆ ಆರೋಗ್ಯ ಹಾಗು ಶಿಕ್ಷಣ ಸೇವೆಯಲ್ಲಿ ಸುತ್ತೂರು ಸಂಸ್ಥಾನದ ಕೊಡುಗೆ ಅಪಾರವಾದುದು. ಕೃಷಿಮೇಳ, ಸಾಂಸ್ಕ್ರತಿಕ ವೈವಿಧ್ಯಗಳು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪೋಷಿಸುತ್ತಾ ಬಂದಿರುವ ಸುತ್ತೂರು ಜಾತ್ರೆಗೆ ಕೊಡಗು ಜಿಲ್ಲೆಯಿಂದ ಹೆಚ್ಚಿನ ಭಕ್ತರು ಧಾವಿಸಿ ಕಣ್ತುಂಬಿಕೊಳ್ಳಬೇಕೆಂದು ಡಾ.ಮಂತರಗೌಡ ಕರೆಕೊಟ್ಟರು.

ಕುಶಾಲನಗರ ಪುರಸಭಾ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಸದಸ್ಯರಾದ ಡಿ.ಕೆ.ತಿಮ್ಮಪ್ಪ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್,
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ‌.ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಯ್ಯ, ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಂದೀಶ್, ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕೂಡಿಗೆಯ ಟಿ.ಪಿ.ಹಮೀದ್, ಉದ್ಯಮಿ ಹೆಚ್.ಟಿ.ರವಿ,
ಕದಳಿ ವೇದಿಕೆ ಪದಾಧಿಕಾರಿಗಳಾದ ಲೇಖನಾ, ವೇದಾವತಿ, ಮನುಜಗದೀಶ್, ಸವಿತಾ ಭರತ್, ಸುತ್ತೂರು ರಥ ಯಾತ್ರೆ ಸಮಿತಿ ಸಂಚಾಲಕ ಪಂಚಾಕ್ಷರಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!