ಕ್ರೀಡೆಅವ್ಯವಸ್ಥೆಆರೋಪಪರಿಸರಪ್ರತಿಭಟನೆಮನವಿಸಾಹಿತ್ಯ

ಚಿನ್ನದ ಪದಕ ವಿಜೇತೆ ಆಜ್ಞಾರಿಗೆ ಕುಶಾಲನಗರದಲ್ಲಿ ಭವ್ಯ ಸ್ವಾಗತ

ಕುಶಾಲನಗರ ಡಿ. 12: ಇಂಡೋನೇಷ್ಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ (ಎಂಎಂಎ) ಚಿನ್ನದ ಪಡೆದು ತವರಿಗೆ ಆಗಮಿಸಿದ ಕೂಡುಮಂಗಳೂರು ಗ್ರಾಮದ ಆಜ್ಞಾ ಅವರಿಗೆ ಕೊಡಗು-ಮೈಸೂರು ಗಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಕೊಡಗಿನ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು ಗ್ರಾಮದ ಅಮಿತ್, ದಿವ್ಯ ದಂಪತಿಗಳ ಪುತ್ರಿ ಅಜ್ನಾ 10 ವರ್ಷದ ವಯೋಮಿತಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿ ಪ್ರಥಮ ಸ್ಧಾನ ಪಡೆದು ಚಿನ್ನದ ಪದಕವನ್ನು ಗಳಿಸಿ ವಿಶ್ವ ಚಾಂಪಿಯನ್ ಅಗಿ ಹೊರಹೊಮ್ಮಿದ್ದಾರೆ.
ಪದಕ‌ ಗಳಿಸಿ ಕುಶಾಲನಗರಕ್ಕೆ ಆಗಮಿಸಿದ ಅವರನ್ನು ಕುಟುಂಬಸ್ಥರು, ಸಂಘಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಭವ್ಯ ಸ್ವಾಗತ ಕೋರಿ ಶುಭ ಹಾರೈಸಿದರು.
ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಆಜ್ಞಾ ಪೋಷಕರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಪುಟ್ಟ ವಯಸ್ಸಿನಲ್ಲಿಯೇ ಅತ್ಯಂತ ದೊಡ್ಡ ಸಾಧನೆ ತೋರಿರುವ ಬಗ್ಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತ ಗೊಂಡಿತು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮುಂದಿನ ವರ್ಷಗಳಲ್ಲಿ ಒಲಂಪಿಕ್ಸ್ ನಲ್ಲಿ ಆಜ್ಞಾ ತನ್ನ ಛಾಪು ಮೂಡಿಸಿ ದೇಶಕ್ಕೆ ಕೀರ್ತಿ ತರುವ ಎಲ್ಲಾ ಸಾಮರ್ಥ್ಯ ಹೊಂದಿರುವುದಾಗಿ ಹರ್ಷ ವ್ಯಕ್ತಪಡಿಸಿದರು.

9 ವರ್ಷದ ಅಜ್ನಾ ಸತತ ಪ್ರಯತ್ನದಿಂದಾಗಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಇಂಡೋನೇಷ್ಯಾ ದೇಶದಲ್ಲಿ ನಡೆದ ಕಿರಿಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ 10 ದೇಶಗಳ ಬಾಕ್ಸಿಂಗ್ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಅಜ್ನಾ ಉತ್ತಮ  ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಅಜ್ನಾ 6 ವರ್ಷಗಳಿಂದಲೂ ಕಿಕ್ ಬಾಕ್ಸಿಂಗ್ ತರಬೇತಿ ಪಡೆಯುತ್ತಾ ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರ ಜೊತೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿ , ಅಂತರಾಷ್ಟ್ರೀಯ ಮಟ್ಟಕ್ಕೆ ಅಯ್ಕೆಯಾಗಿದ್ದರು.
ಅಜ್ನಾನವರ ತಂದೆ ಅಮಿತ್ ಕುಶಾಲನಗರದಲ್ಲಿ ಕಿಕ್ ಬಾಕ್ಸಿಂಗ್ ತರಬೇತಿದಾರರಾಗಿದ್ದು ಅವರೇ ತರಬೇತಿಯನ್ನು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!