ಕುಶಾಲನಗರ, ನ 23: ಕುಶಾಲನಗರದ ಕಾವೇರಿ ನಿಸರ್ಗಧಾಮ ಮುಂಭಾಗದ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಎನ್.ಟಿ.ಸಿ ಉದ್ಯಮಿ ಅಬ್ದುಲ್ ಸಲಾಂ ಕನ್ನಡ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾವೇರಿ ನಿಸರ್ಗ ಧಾಮ ಮುಂಭಾಗದ ನಿಲ್ದಾಣದ ಚಾಲಕರು ಪ್ರವಾಸೋದ್ಯಮ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರವಾಸಿಗರು, ಪ್ರವಾಸೋದ್ಯಮ ನಂಬಿ ಬದುಕು ಕಟ್ಟಿಕೊಂಡವರು ಒಬ್ಬೊರಿಗಿಬ್ಬರು ಪರಸ್ಪರ ಸಹಕಾರದಿಂದ ಜೀವನ ಬಂಡಿ ಸಾಗಿಸಬೇಕಿದೆ ಎಂದರು.
ಸೆಪ್ಟಮ್ ಶಿಕ್ಷಣ ಸಂಸ್ಥೆ ಸ್ಥಾಪಕ ಉಲ್ಲಾಸ್ ಮಾತನಾಡಿ, ರಾಜ್ಯದ ಉದ್ದಗಲಕ್ಕೂ
ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಆಟೋ ಚಾಲಕರು ಪಾತ್ರ ಶ್ಲಾಘನೀಯವಾದುದು. ಪ್ರವಾಸಿಗರೊಂದಿಗಿನ ಸೌಹಾರ್ದ ಒಡನಾಟದ ಮೂಲಕ ತಮ್ಮ ವ್ಯಾಪ್ತಿಯ ಘನತೆಯನ್ನು ಕೂಡ ಕಾಪಾಡಬೇಕಿದೆ ಎಂದು ಕರೆ ನೀಡಿದರು. ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆಯ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್ ಕನ್ನಡಿಗ ಮಾತನಾಡಿ, ಇತರೆ ಭಾಷೆಗಳ ಹಾವಳಿ ನಡುವೆ ಕನ್ನಡ ಭಾಷೆಗೆ ಧಕ್ಕೆ ಉಂಟಾಗದಂತೆ ಜೋಪಾನ ಮಾಡುವುದು ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು. ಕಡ್ಡಾಯ ಕನ್ನಡ ಬಳಕೆಗೆ ಒತ್ತು ನೀಡಿ ಸಂಪೂರ್ಣ ಆಂಗ್ಲಮಯ ವ್ಯವಸ್ಥೆ ನಿಯಂತ್ರಿಸಬೇಕಿದೆ ಎಂದರು.
ಇದೇ ಸಂದರ್ಭ ಸಂಘದ ವತಿಯಿಂದ ಅಬ್ದುಲ್ ಸಲಾಂ, ಉಲ್ಲಾಸ್ ಹಾಗೂ ಆನಂದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರವೇ ನಗರಾಧ್ಯಕ್ಷ ಯೋಗೇಶ್, ಆಟೋ ಚಾಲಕರು ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣ ದರ್ಶನ್, ಕಾವೇರಿ ನಿಸರ್ಗಧಾಮ
ಆಟೋ ನಿಲ್ದಾಣ ಸಂಘದ ಅಧ್ಯಕ್ಷ ನರಸಿಂಹ, ಪ್ರಮುಖರಾದ ದೇವನಾಯಕ್, ಪವನ್ ಮತ್ತಿತರರು ಇದ್ದರು.
Back to top button
error: Content is protected !!