ಮನವಿ

ವಸತಿ ಪ್ರದೇಶದಲ್ಲಿ ಬೈಕ್ ಗ್ಯಾರೆಜ್ ತೆರವಿಗೆ ನಿವಾಸಿಗಳ ಆಗ್ರಹ

ಕುಶಾಲನಗರ, ಅ 23: ಕುಶಾಲನಗರದ ದಂಡಿನಪೇಟೆ 2ನೇ ಬ್ಲಾಕ್ ನಲ್ಲಿ ಬೈಕ್ ಗ್ಯಾರೆಜ್ ನಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದ್ದು ಗ್ಯಾರೆಜ್ ತೆರವುಗೊಳಿಸಲು ಆಗ್ರಹಿಸಿ ಸ್ಥಳೀಯ ‌ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಾರೆ.

ವಸತಿ ಪ್ರದೇಶದಲ್ಲಿ ಗ್ಯಾರೆಜ್ ಶಬ್ಧದಿಂದ ತೊಂದರೆಯಾಗುತ್ತಿದ್ದು ಅಲ್ಲದೆ ಬೈಕ್ ವೀಲಿಂಗ್ ನಂತಹ ಚಟುವಟಿಕೆಗಳು ಮಕ್ಕಳಿಗೆ, ವೃದ್ದರಿಗೆ ಹಾಗೂ ಸಮೀಪದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ‌ ಕೂಡ ಅಪಾಯಕಾರಿ ಸ್ಥಿತಿ ಎದುರಾಗುತ್ತಿದೆ ಎಂದು ಆರೋಪಿಸಿ, ಸದರಿ ಗ್ಯಾರೆಜ್ ಲೈಸೆನ್ಸ್ ರದ್ದುಗೊಳಿಸಿ ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ‌ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!