ಕುಶಾಲನಗರ, ಅ 14: ಪ್ರೇಮಿಸಿ ವಿವಾಹವಾಗಿದ್ದ ದಂಪತಿಯ ನಡುವೆ ಉಂಟಾದ ಕಲಹ ವಿಕೋಪಕ್ಕೆ ತೆರಳಿದ ಪರಿಣಾಮ ಪತ್ನಿ ಚಾಕುವಿನಿಂದ ಇರಿದು ಪತಿಯನ್ನು ಕೊಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ 7:30 ಗಂಟೆಗೆ ಮೂರ್ನಾಡುವಿನ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರದ ಪದ್ಮಿನಿ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಧರ್ಮ (26) ಎಂಬಾತ ಪತ್ನಿ ಶ್ರೀಜಾಳಿಂದ (24) ಹತನಾಗಿದ್ದಾನೆ ಎಂದು ಹೇಳಲಾಗಿದೆ.
ಈ ದಂಪತಿ ಕಳೆದ 10 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಧರ್ಮ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಪತ್ನಿ ಶ್ರೀಜಾ ತನ್ನ ಕೈಲಿದ್ದ ಚಾಕುವಿನಿಂದ ಆತನನ್ನು ತಿವಿದ ಪರಿಣಾಮ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಶ್ರೀಜಾಳನ್ನು ಪೊಲೀಸರು ಬಂಧಿಸಿದ್ದಾರೆ.ಮೃತ ಧರ್ಮ ಕುಶಾಲನಗರದ ಮೂಲನವನಾಗಿದ್ದು,ಶ್ರೀಜ ಬೈರಂಬಾಡದ ನಿವಾಸಿಯಾಗಿದ್ದಾಳೆ. ಇಬ್ಬರು ಪ್ರೀತಿಸಿ ವಿವಾಹದ ನಂತರ ಮೂರ್ನಾಡಿನ ಗಾಂಧಿನಗರದಲ್ಲಿ ವಾಸವಾಗಿದ್ದರು.
Back to top button
error: Content is protected !!