ಕುಶಾಲನಗರ, ಏ 08:ಕಾವೇರಿ ಹೊಳೆಯಲ್ಲಿ ನೀರು ಕ್ಷೀಣಿಸಿದ ಪರಿಣಾಮ ಕುಶಾಲನಗರ ತಾಲೂಕು ಮಾದಾಪಟ್ಟಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿ ಈಗಾಗಲೇ ಎರಡು ತಿಂಗಳಾಗಿದೆ.
ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಕಳೆದ ಒಂದು ವಾರದಿಂದ ತಾಲೂಕು ಆಡಳಿತವು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿದರೂ ಸಹ ಕೇವಲ ಎರಡು ಮೂರು ದಿನ ಮಾತ್ರ ನೀರನ್ನು ನೀಡಿದೆ.
ಸಾರ್ವಜನಿಕರ ದಿನನಿತ್ಯದ ಅಗತ್ಯಗಳಿಗೆ ಅವಶ್ಯಕ ನೀರನ್ನು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡದ ಹಿನ್ನೆಲೆಯಲ್ಲಿ ಮಾದಾಪಟ್ಟಣ ಗ್ರಾಮಸ್ಥರು ಖಾಲಿ ಕೊಡಗಳ ಪ್ರದರ್ಶನ ಮಾಡಿದ ಟಾಸ್ಕ್ ಫೋರ್ಸ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
Back to top button
error: Content is protected !!