ಪರಿಸರ

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಸುಂದರ ಕೊಡಗು-ಸ್ವಚ್ಚ ಕೊಡಗು ಅಭಿಯಾನ

ಕುಶಾಲನಗರ, ಅ 15: ಸುಂದರ ಕೊಡಗು-ಸ್ವಚ್ಚ ಕೊಡಗು ಅಭಿಯಾನದ ಅಂಗವಾಗಿ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು.

ಗ್ರಾಮದ ಗಡಿ ಕಬ್ಬಿನ ಗದ್ದೆ ಬಳಿಯಿಂದ ದುಬಾರೆ ಪ್ರವಾಸಿ ತಾಣದ ತನಕ 5 ಕಿಮೀ ವ್ಯಾಪ್ತಿಯಲ್ಲಿ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ರಿವರ್ ರಾಫ್ಟಿಂಗ್ ಮಾಲೀಕರು,‌ ಕಾರ್ಮಿಕರ ಸಂಘಟನೆ, ಹೋಟೆಲ್ ಅಸೋಸಿಯೇಷನ್ ಸೇರಿದಂತೆ ಗ್ರಾಮದ ವಿವಿಧ ಸಂಘಟನೆ, ಸಂಘಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಹೆದ್ದಾರಿ ಇಕ್ಕೆಲಗಳಲ್ಲಿ ಶ್ರಮ ದಾನ ಮ‌ೂಲಕ ಸ್ವಚ್ಚತೆ ನಡೆಸಿದರು. ಪ್ಲಾಸ್ಟಿಕ್, ಬಾಟಲಿ, ಕಸ ತ್ಯಾಜ್ಯಗಳನ್ನು ಹೆಕ್ಕಿ ಸಂಗ್ರಹಿಸಿ ಟ್ರಾಕ್ಟರ್ ಮೂಲಕ ಸಾಗಿಸಿ ವಿಲೇವಾರಿಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಸ್ವಚ್ಚತೆ ನಮ್ಮೆಲ್ಲರ ಪ್ರಮುಖ ಆದ್ಯತೆಯಾಗಬೇಕಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲ‌ ಪರಿಸರವನ್ನು ಮಾಲಿನ್ಯ ಮಾಡದೆ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟಲು ಮುಂದಾದಾಗ ಮಾತ್ರ ಸುಂದರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಈ ಬಗ್ಗೆ ಎಲ್ಲರೂ ಬದ್ದತೆ ಪ್ರದರ್ಶಿಸುವ ಮೂಲಕ ಪ್ರವಾಸಿಗರಲ್ಲಿ ಕೂಡ ಜಾಗೃತಿ ಮೂಡುಸಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಆರ್.ಕೆ.ಚಂದ್ರ, ಮಾವಜಿ ರಕ್ಷಿತ್, ಮಾಜಿ ಸದಸ್ಯ ಸುಮೇಶ್, ರಿವರ್ ರಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿಜು ಚಂಗಪ್ಪ, ನೌಕರರ ಸಂಘದ ಅಧ್ಯಕ್ಷ ನಿತನ್, ಹೋಟೆಲ್ ಉದ್ಯಮಿ ರತೀಶ್ ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!