ಅರಣ್ಯ ವನ್ಯಜೀವಿ

ಕೇರಳದ ಮಾನಂದವಾಡಿಯಲ್ಲಿ ಸೆರೆಹಿಡಿದ ತಣ್ಣೀರ್ ಕೊಂಬನ್ ಸಾವನ್ನಪ್ಪಿದೆ

ಜ. 16 ರಂದು ಹಾಸನ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿತ್ತು.

ಕುಶಾಲನಗರ, ಫೆ 03: ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಿಂದ ಸೆರೆ ಸಿಕ್ಕ ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆ ಕರ್ನಾಟಕದ ಬಂಡೀಪುರದಲ್ಲಿ ಸಾವನ್ನಪ್ಪಿದೆ. ಕಾಡಾನೆಗೆ ಅರವಳಿಕೆ‌ ನೀಡಿ ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು.ಫೆಬ್ರವರಿ 3 (ಶನಿವಾರ) ಬೆಳಗ್ಗೆ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ.

ಹಾಸನ ಜಿಲ್ಲೆಯಲ್ಲಿ ದಾಹ ತಣಿಸಿಕೊಳ್ಳಲು ಕಾಫಿ ತೋಟಗಳಲ್ಲಿ ಅಳವಡಿಸಿದ್ದ ನೀರಿನ ಪೈಪ್ ಗಳನ್ನು ಒಡೆದು ಹಾಕುತ್ತಿದ್ದ ಈ ಆನೆಗೆ ತಣ್ಣೀರ್ ಕೊಂಬನ್ ಎಂದು ಹೆಸರು ಬಂದಿತ್ತು.

ಮಾನಂದವಾಡಿಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸೆರೆಹಿಡಿಯಲು ಅಲ್ಲಿ ನಿಷೇದಾಜ್ಞೆ ಹೊರಡಿಸಿ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಸಕಾಲದಲ್ಲಿ ಸೂಕ್ತ ಆದೇಶಗಳು‌ ದೊರೆಯದೆ ಕಾರ್ಯಾಚರಣೆ ತಡವಾಗಿ ನೀಡಿದ ಅರವಳಿಕೆ ಏರುಪೇರಿನಿಂದ ಕಾಡಾನೆ ಸಾವನ್ನಪ್ಪಿದೆ ಎಂಬ ಅರೋಪಗಳು‌ಕೇಳಿಬಂದಿವೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದು ಕೇರಳದ ಅರಣ್ಯ ಸಚಿವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!