ಕುಶಾಲನಗರ, ಫೆ 01:
ತೊರೆನೂರು ಗಾಮಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿಳಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಗ್ರಾಮದ ಗದ್ದೆಹೊಸಳ್ಳಿಯಲ್ಲಿ ಬಿಳಿ ಕಲ್ಲನ್ನು ದಂಧೆಕೋರರು ಅವ್ಯಾಹತವಾಗಿ ಸಾಗಾಟದಲ್ಲಿ ತೊಡಗಿದ್ದು, ಈ ಬಗ್ಗೆ ಗ್ರಾಮಪಂಚಾಯತ್ ಮೂಲಕ ನಿರ್ಭಂಧ ವಿಧಿಸಿ ಎಚ್ಚರಿಸಿದ್ದರೂ ಕೂಡ ರಾತ್ರೋರಾತ್ರಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಪಂಚಾಯತ್ ಸದಸ್ಯರುಗಳು ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆ ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಜೆಸಿಬಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದು ತನಿಖೆ ಮುಂದುವರೆಸಿದ್ದಾರೆ.
Back to top button
error: Content is protected !!