ಕುಶಾಲನಗರ, ಆ 23: ಗೊಂದಿಬಸವನಹಳ್ಳಿ ಮೇನ್ ಕೋರೆಯಲ್ಲಿ ಇರುವ 2ನೇ ಅಂಗನವಾಡಿ ಕೇಂದ್ರದ ಮುಂದೆ ಒಣಗಿದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ದುರ್ಘಟನೆ ಸಂಭವಿಸುವ ಮುನ್ನ ತೆರವುಗೊಳಿಸಲು ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಹರೀಶ್ ಒತ್ತಾಯಿಸಿದ್ದಾರೆ.
ಈಗಲೋ ಆಗಲೋ ಬೀಳುವ ಹಂತದಲ್ಲಿರುವ ಮರ ತೆರವು ಗೊಳಿಸಲು ಸಂಬಂಧ ಪಟ್ಟ ಪುರಸಭೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕಿದೆ. ಪುಟಾಣಿ ಮಕ್ಕಳಿಗೆ ಅನಾಹುತ ಉಂಟಾಗುವ ಮುನ್ನ ಮರ ತೆರವುಗೊಳಿಸಲು ಅವರು ಅಗ್ರಹಿಸಿದ್ದಾರೆ.
Back to top button
error: Content is protected !!