ಕುಶಾಲನಗರ, ಆ 23 : ಹಿರಿಯರ ದಿನದ ಅಂಗವಾಗಿ ಕುಶಾಲನಗರದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಕೂಡಿಗೆಯಲ್ಲಿನ ವೃದ್ದಾಶ್ರಮದ ಹಿರಿಯ ಜೀವಗಳೊಂದಿಗೆ ಶುಕ್ರವಾರ ಸಮಯ ಕಳೆದರು.
ಲಯನ್ಸ್ ಅಧ್ಯಕ್ಷ ಡಾ. ಪ್ರವೀಣ್ ದೇವರ ಗುಂಡ ನೇತೃತ್ವದಲ್ಲಿನ ತಂಡ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ಜೀವಗಳು ಸಂತಸದಲ್ಲಿ ಸಮಯ ಕಳೆಯುವ ಬಗ್ಗೆ ಹಾಗೂ ಅವರಿಗೆ ಪೌಷ್ಠಿಕಾಂಶ ಯುಕ್ತ ಆಹಾರ ನೀಡುವ ಕುರಿತು ವೃದ್ದಾಶ್ರಮದ ಮೇಲ್ವಿಚಾರಕ ಚಂದ್ರು ಅವರಿಗೆ ತಾಜಾ ಮಾಂಸಾಹಾರ ಹಾಗೂ ಪೌಷ್ಠಿಕಾಂಶಯುಕ್ತ ದ್ವಿದಳ ಧಾನ್ಯಗಳನ್ನು ಉಚಿತವಾಗಿ ನೀಡಿದರು.
ಮುಪ್ಪು ಇಂದು ನಿಮಗೆ. ನಾಳೆ ನಮಗೆ.
ಹಾಗಾಗಿ ಇರುವಷ್ಟು ದಿನಗಳ ಕಾಲ ನಿಶ್ಚಿಂತೆಯಿಂದ ಕಾಲ ಕಳೆಯಬೇಕೆಂದು ಡಾ. ಪ್ರವೀಣ್ ಸ್ಥೈರ್ಯ ತುಂಬಿದರು.
ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ನಿತಿನ್ ಗುಪ್ತ, ಖಜಾಂಚಿ ಕಿರಣ್, ವಲಯಾಧ್ಯಕ್ಷ ಸುಮನ್ ಬಾಲಚಂದ್ರ, ನಿರ್ದೇಶಕ ಕೊಡಗನ ಹರ್ಷ ಇದ್ದರು.
ವರದಿ : ಕೆ.ಎಸ್.ಮೂರ್ತಿ
Back to top button
error: Content is protected !!