ಪ್ರತಿಭಟನೆ
ಮಡಿಕೇರಿಯಲ್ಲಿ ಬಿಜೆಪಿ ಬಹತ್ ಪ್ರತಿಭಟನೆ


ಕುಶಾಲನಗರ, ಆ 22: ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯದ್ಯಂತ ಪ್ರತಿಭಟನೆ ಅಂಗವಾಗಿ ಕೊಡಗು ಬಿಜೆಪಿ ವತಿಯಿಂದ ಫೀಲ್ಡ್ ಮಾರ್ಷಯಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ಮಾಡುವ ಮುಖಾಂತರ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ತದನಂತರ ಮೆರವಣಿಗೆ ಮುಕಾಂತರ ನೂರಾರು ಕಾರ್ಯಕರ್ತರ ಜೊತೆಗೂಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರು, ಮಾಜಿ ಶಾಸಕರು, ಎಲ್ಲಾ ಮಂಡಲ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಇದ್ದರು.