ಕ್ರೀಡೆ

ನಂಜರಾಯಪಟ್ಟಣ ಸ.ಮಾ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಅಂತರ್ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ

ಕುಶಾಲನಗರ, ಆ 21: ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ಬೀಕರಿಸಬೇಕಿದೆ. ಸೋತವರು ಸುಮ್ಮನಾಗದೆ ಗೆಲುವಿಗಾಗಿ ನಿರಂತರ ಪ್ರಯತ್ನ ಮಾಡಬೇಕಿದೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಕರೆ ನೀಡಿದರು.

ನಂಜರಾಯಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ  ವಲಯ ಮಟ್ಟದ ಅಂತರ್ ಪ್ರಾಥಮಿಕ ಶಾಲೆಗಳ ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಎಲ್ಲರೂ ಗೆಲುವಿಗಾಗಿ ಶ್ರಮಿಸುವುದು ಸಾಮಾನ್ಯ. ಗೆದ್ದವರಿಗೆ ಟ್ರೋಫಿ ಹಾಗೂ ಸಂತೋಷ ದಕ್ಕುತ್ತದೆ. ಆದರೆ ಸೋತವರು ಸುಮ್ಮನಾಗದೆ ಗೆಲುವಿಗಾಗಿ ಪ್ರಯತ್ನಿಸಿ ಅವಿರತ ಶ್ರಮವಹಿಸುವಂತೆ ಅವರು ಕರೆ ನೀಡಿದರು.
ಕ್ರೀಡಾಕೂಟಗಳು ವಿದ್ಯಾರ್ಥಿಗಳ ದೈಹಿಕ‌ ಮಾನಸಿಕ ಅಭಿವೃದ್ಧಿಗೆ ಸಹಕಾರಿಯಾಗುವುದರೊಂದಿಗೆ ಅವರ ಸಾಧನೆ ಶಾಲೆ ಹಾಗೂ ತಮ್ಮ ಊರಿನ ಕೀರ್ತಿ ಹೆಚ್ಚಿಸುತ್ತದೆ. ಕ್ರೀಡಾಕೂಟ ಸಂದರ್ಭ ಎಲ್ಲರೂ ಕಡ್ಡಾಯವಾಗಿ ಶಿಸ್ತು ಪಾಲಿಸಬೇಕಿದೆ ಎಂದರು.

ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಸುಕುಮಾರಿ ಮಾತನಾಡಿ, ಎಲ್ಲಾ ರೀತಿಯ ಸಾಧನೆಯಲ್ಲಿ ಸದೃಢ ದೇಹ ಪ್ರಮುಖ ಪಾತ್ರ ವಹಿಸುತ್ತದೆ. ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಲು ಉತ್ತಮ ಆರೋಗ್ಯ ಅವಶ್ಯಕ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಂಡು ಸದೃಢರಾಗಬೇಕಿದೆ ಎಂದರು.

ದಾನಿಗಳಾದ ಟಿ.ಕೆಮಲ.ಸೋಮನ್ ಅವರು ಕ್ರೀಡಾಜ್ಯೋತಿ ಬೆಳಗಿಸಿದರು.
ಅತಿಥಿಗಳು ವಾಲಿಬಾಲ್ ಮತ್ತು‌ ಥ್ರೋಬಾಲ್ ಪಂದ್ಯಾಟಗಳಿಗೆ ಚಾಲನೆ ನೀಡಿದರು.
15 ಶಾಲೆಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕ್ರೀಡೆ ಆರಂಭಕ್ಕೂ ಮುನ್ನ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಾನಿಗಳಾದ ಬಿ.
ಸಿ.ಕಾಳಯ್ಯ, ನಡುಮನೆ ಚಿಂತು, ಶಾಲಾ ಮುಖ್ಯ ಶಿಕ್ಷಕಿ ಡಿ.ಸರಳಾರಾಣಿ, ಶಿಕ್ಷಕಿ ಸಿ.ಬಿ.ಮೀನಾಕ್ಷಿ, ಸಹ ಶಿಕ್ಷಕರಾದ ನಾಗಮ್ಮ, ರೇಖಾ, ಪೂರ್ಣಿಮಾ, ತಾರಾ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕ ಶಿಕ್ಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!