ಕುಶಾಲನಗರ, ಜು 15: ಕೆಲವು ತಿಂಗಳ ಹಿಂದೆ ಕೊಪ್ಪ ಗ್ರಾಮದ ಮೂಲಕ ಟಿಬೇಟಿಯನ್ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಕೊಲ್ಲಿಗೆ ಅಡ್ಡಲಾಗಿ ನೂತನವಾಗಿ ಕಿರು ಸೇತುವೆ ನಿರ್ಮಿಸಲಾಗಿದೆ.
ಆದರೆ ಸೇತುವೆ ಕಾಮಗಾರಿ ಪೂರ್ಣಗೊಂಡರೂ ಸೇತುವೆ ಎರಡು ಬದಿ ಪ್ರವೇಶಿಸುವ ರಸ್ತೆಗೆ ಬರೀ ಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಆದರೆ ಇದೀಗ ಮಳೆಗೆ ಆ ಮಣ್ಣಿನ ಗುಡ್ಡೆ ಸಂಪೂರ್ಣ ಕೆಸರುಮಯವಾಗಿದೆ. ಒಂದು ಬದಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನಗಳ ಸಂಚಾರ ದುಸ್ಥರವಾಗಿದೆ. ಇನ್ನು ಕಾಲ್ನಡಿಗೆಯಲ್ಲಿ ತೆರಳುವವರ ಪರಿಸ್ಥಿತಿ ಹೇಳತೀರದು. ಇದು ಕಾಮಗಾರಿ ನಿರ್ಮಿಸಿದ ಇಲಾಖೆ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.