ಹೆಚ್ ಡಿ ಕೋಟೆ, ಜು 13: ಕಬಿನಿ ಜಲಾಶಯದ ಮುಖ್ಯ ನಾಲ್ಕು ಕ್ರಸ್ಟ್ ಗೇಟ್ ಗಳಿಂದ 15 ಸಾವಿರ ಕ್ಯೂ ಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.
ಕೇರಳ ವಯನಾಡಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಭದ್ರತಾ ಹಿತ ದೃಷ್ಟಿಯಿಂದ ಜಲಾಶಯದ ಮುಖ್ಯ ನಾಲ್ಕು ಕ್ರಸ್ಟ್ ಗೇಟ್ ಗಳಿಂದ 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಜಲಾಶಯದ ಮುಂಭಾಗ ಇರುವ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ, ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಹ್ಯಾಂಡ್ ಪೋಸ್ಟ್ ನಿಂದ ಬಿದರಹಳ್ಳಿ, ಬಸಾಪುರ, ತೆರಣಿ ಮಂಟಿ, ಏನ್. ಬೇಗೂರು, ಬೀರಂಬಳ್ಳಿ, ಕಡೆಗೆ ತೆರಳುವ ಜನತೆಗೆ, ಮಾತ್ರ ದ್ವಿಚಕ್ರವಾಹನದಲ್ಲಿ ಜಲಾಶಯದ ಅಣೆಕಟ್ಟಿನ ಮೇಲೆ ತೆರಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಲಾಶಯದಲ್ಲಿ ಅತಿ ಹೆಚ್ಚು ನೀರು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ, ನದಿಗೆ ಇನ್ನು ಹೆಚ್ಚು ನೀರು ಬಿಡುವ ಸಾಧ್ಯತೆಗಳಿವೆ ಆದ್ದರಿಂದ ತಗಾದ ಪ್ರದೇಶದಲ್ಲಿರುವ ಜನತೆಗಳು ಮೀನುಗಾರರು, ದನ ಕರು ಮೇಯಿಸುವವರು ಮುಂಜಾಗ್ರತೆ ವಹಿಸಿ ಸೂಕ್ತ ಸ್ಥಳಕ್ಕೆ ತೆರಳಬೇಕು ಎಂದು ಕಬಿನಿ ಸಹಾಯಕ ಕಾರ್ಯಪಾಲಕ ಅಭಿಯಂತರದ ಗಣೇಶ್ ಮನವಿ ಮಾಡಿದ್ದಾರೆ.
Back to top button
error: Content is protected !!