ಕುಶಾಲನಗರ, ಜು 10: ದಿನಾಂಕ: 09-07-2024 ರಂದು ಮಧ್ಯಾಹ್ನ ಸುಮಾರು 03.15 ಗಂಟೆ ಸಮಯದಲ್ಲಿ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ರಸ್ತೆಯಲ್ಲಿ 5 ಜನರು (2 ಅಪ್ರಾಪ್ತ ಬಾಲಕಿ & 3 ಗಂಡು ) ತೆರಳುವ ಸಂದರ್ಭ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು (ಮಾರುತಿ 800) ನಿಲ್ಲಿಸಿದ್ದು, ಕಾರಿನಲ್ಲಿ ಇದ್ದ ಅಪರಿಚಿತ 2 ವ್ಯಕ್ತಿಗಳೊಂದಿಗೆ ನಾಗರಹೊಳೆ ಕಡೆ ಬಿಡುವಂತೆ ಕೇಳಿ ಕಾರಿನಲ್ಲಿ 05 ಜನ ಪ್ರಯಾಣಿಸಿದ್ದು, ಸ್ವಲ್ಪ ದೂರ ತೆರಳಿದ ನಂತರ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಅಪರಿಚಿತ ಇಬ್ಬರೂ ವ್ಯಕ್ತಿಗಳು ಒಂದು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿದ್ದು ಹಾಗೂ ಜೊತೆಯಲ್ಲಿ ಬಂದಿದ್ದ ಮೂರು ಹುಡುಗರು ಮತ್ತೊಂದು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಕುರಿತು ದೂರು ಸ್ವೀಕರಿಸಿದ್ದು, ಕುಟ್ಟ ಪೊಲೀಸ್ ಠಾಣೆಯಲ್ಲಿ 137(2), 140(4), 70(2), 76 ಬಿಎನ್ಎಸ್ & 4, 6, 10 ಪೋಕೋ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ, ಶ್ರೀ ಸುಂದರ್ ರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಶ್ರೀ ಆರ್. ಮೋಹನ್ ಕುಮಾರ್, ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ ಹಾಗೂ ಶ್ರೀ ಮಂಜಪ್ಪಸಿ.ಎ, ಸಿಪಿಐ, ಕುಟ್ಟ ವೃತ್ತ & ಶ್ರೀ ಮಹದೇವ.ಹೆಚ್.ಕೆ. ಪಿಎಸ್ಐ, ಕುಟ್ಟ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು, ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 10-07-2024 ರಂದು ಪ್ರಕರಣ ದಾಖಲಾದ 12 ಗಂಟೆಯಲ್ಲಿ 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ
ಆರೋಪಿಗಳ ವಿವರ:
1. ನವೀಂದ್ರ, 24 ವರ್ಷ, ನಾಥಂಗಾಲ, ಕುಟ್ಟಿ,
2. ಅಕ್ಷಯ್, 27 ವರ್ಷ, ನಾಥಂಗಾಲ.ಕುಟ್ಟ,
3. ರಾಹುಲ್, 21 ವರ್ಷ, ನಡುಂದನ ಕಾಲೋನಿ, ತೋಲ್ಪಟ್ಟಿ, ಕೇರಳ ರಾಜ್ಯ
4. ಮನು, 25 ವರ್ಷ, ನಡುಂದನ ಕಾಲೋನಿ, ತೋಲ್ಪಟ್ಟಿ ಕೇರಳ ರಾಜ್ಯ,
5. ಸಂದೀಪ, 27 ವರ್ಷ, ನಡುಂದನ ಕಾಲೋನಿ, ತೋಲ್ಪಟ್ಟಿ, ಕೇರಳ ರಾಜ್ಯ,
ವಶಪಡಿಸಿಕೊಂಡ ಸ್ವತ್ತುಗಳ ವಿವರ: ಕಾರು – 1.
Back to top button
error: Content is protected !!