ಕಾರ್ಯಕ್ರಮ

ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಾ.ಪ್ರವೀಣ್ ದೇವರಗುಂಡ ಅಧಿಕಾರ ಸ್ವೀಕಾರ

ಲಯನ್ಸ್ ನೂತನ ಅವಧಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕುಶಾಲನಗರ, ಜು 10: ಕುಶಾಲನಗರ ಲಯನ್ಸ್ ಕ್ಲಬ್ ನ ನೂತನ ಅವಧಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದ‌ ಎಪಿಸಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯದರ್ಶಿಯಾಗಿ ನಿತಿನ್ ಗುಪ್ತ, ಖಜಾಂಚಿತಾಗಿ ಎಂ.ಜಿ.ಕಿರಣ್ ಅಧಿಕಾರ ವಹಿಸಿಕೊಂಡರು.

ಲಯನ್ಸ್ ಜಿಲ್ಲಾ 317-ಡಿ ಉಪಾಧ್ಯಕ್ಷ ಕುಡ್ಪಿ ಅರವಿಂದ್ ಶೆನಾಯ್ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಾಮಾಜಿಕ ಸೇವಾ ಕಾರ್ಯಕ್ಕೆ ಹೆಸುವಾಸಿಯಾದ ಲಯನ್ಸ್ ಕ್ಲಬ್‌ ಹಲವು ಸಮಾಜಮುಖಿ‌ ಚಟುವಟಿಕೆಗಳನ್ನು ನಿರಂತರವಾಗಿ‌ ಹಮ್ಮಿಕೊಂಡು ಬರುತ್ತಿದೆ. ಸೇವಾ ಕಾರ್ಯಗಳು ಮನುಷ್ಯನಲ್ಲಿ ಸಂತಸ, ಆತ್ಮ ತೃಪ್ತಿ ಉಂಟುಮಾಡುತ್ತವೆ. ಜಗತ್ತನ್ನು ಬದಲಾಯಿಸಲು ಸಾಧ್ಯವಾಗದಿದ್ದರೂ ನಮ್ಮ ಸಹಕಾರದಿಂದ ಸಮಾಜದಲ್ಲಿ ಸಣ್ಣ ಬದಲಾವಣೆ ತರಲು ಸಾಧ್ಯವಿದೆ. ಆದ್ದರಿಂದ ಲಯನ್ಸ್ ಸದಸ್ಯರು ಅಗತ್ಯವಿರುವರಿಗೆ ಸಹಾಯಹಸ್ತ ಚಾಚುವ ಮೂಲಕ ಅವರ ಜೀವನದಲ್ಲಿ ಬದಲಾವಣೆ ತರಲು ಸದಾ ಸಿದ್ದವಿರಬೇಕಿದೆ ಎಂದರು.

ನೂತನ ಅಧ್ಯಕರಾಗಿ ಅಧಿಕಾರ ವಹಿಸಿಕೊಂಡ ಡಾ.ಪ್ರವೀಣ ಮಾತನಾಡಿ, ವಿನೂತನ ಕಾರ್ಯಕ್ರಮಗಳು, ಚಟುವಟಿಕೆಗಳ ಮೂಲಕ ಕುಶಾಲನಗರ ಲಯನ್ಸ್ ಕ್ಲಬ್ ಅನ್ನು ಮತ್ತಷ್ಟು ಯಶಸ್ವಿಯಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಳೆದ ಅವಧಿಯಲ್ಲಿ ಲಯನ್ಸ್ ಸಾಧನೆಗೆ ದೊರೆತ‌ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಹಸ್ತಾಂತರ ಮಾಡಲಾಯಿತು.

ಪ್ರಾದೇಶಿಕ ಮುಖ್ಯಸ್ಥರಾದ ಕನ್ನಿಕಾ ಅಯ್ಯಪ್ಪ, ವಲಯ ಮುಖ್ಯಸ್ಥರಾದ ಬೊಳ್ಳಪ್ಪ, ಮಹದೇವಪ್ಪ, ನಿಕಟಪೂರ್ವ ಅಧ್ಯಕ್ಷ ಸುಮನ್ ಬಾಲಚಂದ್ರ, ಕಾರ್ಯದರ್ಶಿ ಟಿ.ಕೆ.ರಾಜಶೇಖರ್, ಪ್ರಮುಖರಾದ ಕೊಡಗನ‌ ಹರ್ಷ, ಚಿಣ್ಣಪ್ಪ, ಸತೀಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!