ನಿಧನ
ನಿಧನ: ಸಂಗಪ್ಪ ಆಲೂರು
ಕುಶಾಲನಗರ, ಜೂ 02:ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರ ತಂದೆ. ಸಂಗಪ್ಪ ಆಲೂರು ಇಂದು ಬೆಳಿಗ್ಗೆ 10.00 ರ ಸಮಯದಲ್ಲಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಮೃತರ ಅಂತ್ಯಕ್ರಿಯೆ ಬಾಗಲಕೋಟೆ ನಗರದ ಬಳೂಲಮಠ ರುದ್ರಭೂಮಿಯಲ್ಲಿ ನಾಳೆ ಬೆಳಿಗ್ಗೆ 11:00ಕ್ಕೆ ಜರುಗಲಿದೆ.