ಕುಶಾಲನಗರ, ಏ 30: ಕೊಡಗಿನಲ್ಲಿ ವಾಡಿಕೆಯಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬೀಳುತ್ತಿದ್ದ ಮಳೆ ಈ ಬಾರಿ ಕೈ ಕೊಟ್ಟಿದ್ದು ಕಾಫಿ ಬೆಳೆಗಾರರಿಗೆ , ಕುಡಿಯುವ ನೀರಿಗೆ, ಜೀವ ಜಲ ರಾಶಿ ಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಅದರಲ್ಲಿಯೂ ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ದಿನ ನಿತ್ಯ ಟ್ಯಾಂಕರ್ ನಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ನಂಜರಾಯಪಟ್ಟಣ ದಿಂದ ಕೂಡಿಗೆ ವರೆಗಿನ ಕಾವೇರಿ ನದಿಯಲ್ಲಿ ನೀರು ಇಲ್ಲದೆ ಜಲಚರಗಳು ನಶಿಸುತ್ತಿದ್ದು, ನದಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ. ಚಿಕ್ಲಿಹೊಳೆ ಜಲಾಶಯದ ನೀರಿನ ಸಂಗ್ರಹವನ್ನು 0.18 ಟಿ. ಎಂ.ಸಿ ಇಂದ ಹೆಚ್ಚು ಮಾಡಿ ಬಲ ದಂಡೆ ಮೂಲಕ ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗಾಗಿ ಕಾವೇರಿ ನದಿಗೆ ನೀರು ಹರಿಸಲು ಮತ್ತು ಜಲ ರಾಶಿ ಗಳ ಉಳಿವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ನೀರಾವರಿ ಅಧಿಕಾರಿಗಳಿಗೆ ಮಾನ್ಯ ಮಡಿಕೇರಿ ಶಾಸಕರು ಸೂಚನೆ ನೀಡಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುವಂತೆ ಕಾನೂನು ವಿದ್ಯಾರ್ಥಿ ಕುಶಾಲನಗರದ ಕುಲದೀಪ್ ಅಗ್ರಹಿಸಿದ್ದಾರೆ.
Back to top button
error: Content is protected !!