ಕ್ರೈಂ

ಡಿಜಿಟಲ್ ಸ್ಡುಡಿಯೋ ಬಾಗಿಲು‌ ಮುರಿದು ಕಳ್ಳತನ: ಆರೋಪಿಗಳ ಬಂಧನ

ಕುಶಾಲನಗರ, ಅ 10: ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿ  ಎಂ.ಎಂ.ಅಬ್ದುಲ್ ರೆಹಮಾನ್ ರವರಿಗೆ ಸೇರಿದ ಬ್ರೈಟ್ ಡಿಜಿಟಲ್ ಸ್ಟುಡಿಯೋವನ್ನು ದಿನಾಂಶ: 25-09-2025 ರಂದು ರಾತ್ರಿ ಸಮಯದಲ್ಲಿ ಬಾಗಿಲು ಮುರಿದು ಕಲರ್ ಪ್ರಿಂಟರ್ ಹಾಗೂ ಕೇಬಲ್‌ಗಳನ್ನು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(3), 331(4), 305 ಬಿಎನ್ ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ  ಚಂದ್ರಶೇಖರ್.ಪಿ, ಡಿಎಸ್ಪಿ, ಪ್ರಭಾರ ಮಡಿಕೇರಿ ಉಪವಿಭಾಗ,  ರಾಜು.ಪಿ.ಕೆ. ಸಿಪಿಐ. ಮಡಿಕೇರಿ ನಗರ ವೃತ್ತ, ಕು|| ಅನ್ನಪೂರ್ಣ.ಎಸ್.ಎಸ್. ಪಿಎಸ್‌ಐ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಿ: 10-10-2025 ರಂದು 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಪನ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿರತ್ತದೆ.

ಆರೋಪಿಗಳ ವಿವರ:

1. ಮಹಮದ್ ಸುಹೇಲ್, 24 ವರ್ಷ, ಬೇತು ಗ್ರಾಮ, ಮಡಿಕೇರಿ ತಾ||

2. ಮಹಮದ್ ಮುಬಶಿರ್.ಟಿ.ಹೆಚ್. 20 ವರ್ಷ, ಹೊದವಾಡ ಗ್ರಾಮ, ಮಡಿಕೇರಿ ತಾ

3. ಮಹಮದ್ ಜೈನದ್ದೀನ್, 20 ವರ್ಷ, ಕುಂಜಿಲ ಗ್ರಾಮ, ವಿರಾಜಪೇಟೆ ಹಾಕಿ

4. ಮುಜಾಮಿಲ್.ಕೆ.ಎಂ, 20 ವರ್ಷ, ಕೊಳಕೇರಿ ಗ್ರಾಮ, ನಾಪೊಕ್ಲು

5. ಫಯಾಜ್.ಆರ್.ಬಿ. 25 ವರ್ಷ, ಬೇಕು ಗ್ರಾಮ, ಮಡಿಕೇರಿ ತಾ||.

ವಶಪಡಿಸಿಕೊಂಡ ಸ್ವತ್ತುಗಳ ವಿವರ: 1. ಪ್ರಿಂಟರ್

2. ಕೇಬಲ್‌ಗಳು.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಕಳವು ಮಾಲನ್ನು ವಶಪಡಿಸಿಕೊಳ್ಳವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರುಗಳನ್ನು.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ ಬಿ.ಪಿ.ದಿನೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

ವಿಶೇಷ ಸೂಚನೆ:- ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ಯಾವುದೆ? ರೀತಿಯ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹಾಗೂ ಅಕ್ರಮ ಚಟುವಟಿಕೆಗಳು ನಡೆಯುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ತುರ್ತು ಸಹಾಯವಾಣಿ -112 ಕ್ಕೆ ಕರೆ ಮಾಡಿ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತ್ತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!