ಧಾರ್ಮಿಕ

ಕೂಡ್ಲೂರಿನಲ್ಲಿ ಯುಗಾದಿ ಅಂಗವಾಗಿ ಹೊನ್ನಾರು ಆಚರಣೆ

ಕುಶಾಲನಗರ ಏ 11: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ
ಕೂಡ್ಲೂರು ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಾಲಯ
ಸಮಿತಿ ಆಶ್ರಯದಲ್ಲಿ ಹೊಸ ಸಂವತ್ಸರ ಯುಗಾದಿ ಹಬ್ಬದ ಅಂಗವಾಗಿ ಜನಪದೀಯ ಸಂಸ್ಕೃತಿಯ ಆಚರಣೆಗಳಲ್ಲಿ ಒಂದಾದ ‘ಹೊನ್ನಾರು’ ಉತ್ಸವವನ್ನು
ರೈತರು ಸಂಭ್ರಮ, ಸಡಗರದಿಂದ ಆಚರಿಸಿದರು.
ಗ್ರಾಮದ ದೇವಾಲಯದಲ್ಲಿ ಜಾನುವಾರುಗಳಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು, ಉತ್ತಮ ಮಳೆ ಬೆಳೆ ಬಂದು ಕೃಷಿ ಕಾರ್ಯ ಸಂತುಷ್ಟಗೊಳ್ಳಲಿ ಎಂದು
ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದಲ್ಲಿ ಗ್ರಾಮ ದೇವಾಲಯ ಸಮಿತಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ
“ಹೊನ್ನಾರು” ನೇಗಿಲು ಹೂಡಿ ಉಳುಮೆ ಕಾರ್ಯಕ್ಕೆ
ರೈತ ಕೆ.ಆರ್.ನಾಗರಾಜು ಚಾಲನೆ ನೀಡಿದರು.
ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ, ಗ್ರಾಮದ ಹಿರಿಯ ರೈತ
ಕೆ.ಎಸ್.ರಾಜಾಚಾರಿ ಮಾತನಾಡಿದರು.

ಗ್ರಾ.ಪಂ.ಸದಸ್ಯ ಕೆ.ಕೆ.ಭೋಗಪ್ಪ,ಸ್ಥಳೀಯರಾದ ಕೆ.ಎನ್.ಸೋಮಶೇಖರ್, ಕೆ.ಬಿ.ಈರಪ್ಪ,ರುಕ್ಮಾಂಗದ ಅರಸ್, ನಟರಾಜ, ಚಂದ್ರು ಇತರರು ಇದ್ದರು.

ಯುಗಾದಿ ಅಂಗವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಮಾಡಿದ್ದ ಕಂದಲಿ ಅಲಂಕಾರ ಗಮನ ಸೆಳೆಯಿತು.

ಅಡ್ಡಪಲ್ಲಕ್ಕಿಯಲ್ಲಿ ದೇವರ ಮೂರ್ತಿ ಕುಳ್ಳಿರಿಸಿದ ನಂತರ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!