ಕುಶಾಲನಗರ, ಮಾ 26: ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ ಬೈಚನಹಳ್ಳಿ( ನೆಟ್ಲಿ ‘ ಬಿ’) ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಆಗಿದ್ದ ದಿವಂಗತ ಲೋಕೇಶ್ ಪೂಜಾರಿ ಅವರ ಅಣ್ಣ ಮನು (39) ಸೋಮವಾರ ಸಂಜೆ ಮನೆಯ ಅನತಿ ದೂರದಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೀವ ಅವರ ಪುತ್ರ ಲೋಕೇಶ್ ಅವರು ಮರದಿಂದ ಬಿದ್ದು ಮೃತಪಟ್ಟ ಏಳು ತಿಂಗಳಲ್ಲಿ ಮತ್ತೊಬ್ಬ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತರು ತಂದೆ, ತಾಯಿ,ಪತ್ನಿ,ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Back to top button
error: Content is protected !!