ಕುಶಾಲನಗರ, ಫೆ 18: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ವಾರ್ಷಿಕ ಮಹಾ ಸಭೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು.
ಈ ಸಂದರ್ಭ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲ್ಲಾಖೆಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆಗೆ ರಾಜ್ಯದ 23 ಪಿಡಿಒ ಗಳನ್ನು ಸನ್ಮಾನಿಸಲಾಯಿತು.
ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಗುಡ್ಡೆಹೊಸುರು ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಆದ ಸುಮೇಶ್ ಎಂ ಆರ್ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಆದ ಅಬ್ದುಲ್ಲಾ ರವರು ಪುರಸ್ಕಾರ ಸ್ವೀಕರಿಸಿದರೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಆದ ಶ್ರೀನಿವಾಸ್ ಹಾಗೂ ಪಿಡಿಒ ವೇಣುಗೋಪಾಲ್ ಇವರುಗಳು ಸೇರಿ ಕೊಡಗು ಜಿಲ್ಲೆಯ 04 ಪಿಡಿಒ ಗಳು ಪುರಸ್ಕಾರಕ್ಕೆ ಭಾಜನರಾದರು
Back to top button
error: Content is protected !!