ಕುಶಾಲನಗರ, ಫೆ 03: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕು ಶಿರಹೊಳಲು ಗ್ರಾಮದ ಜಿ.ಎಲ್ ನಾರಾಯಣ ಎಂಬವರ ಮಗಳಾದ ಶಶಿಕಲ ಜಿ.ಎನ್. ಎಂಬವರು ತಮ್ಮ ತಂದೆ ಹಾಗೂ ಸಹೋದರರು ಸೇರಿದಂತೆ ಕೂಡಿಗೆ ಗ್ರಾಪಂ ಅಧ್ಯಕ್ಷೆ, ಪಿಡಿಒ ವಿರುದ್ದ ದೂರು ದಾಖಲಿಸಿದ್ದಾರೆ.
ಶಶಿಕಲಾ ಅವರಿಗೆ ಅಶೋಕ ಜಿ.ಎನ್, ಶೈಲೇಶ್ ಚಂದ್ರ ಗುಡಿಹಟ್ಟಿ ಮತ್ತು ಸಂಪತ್ ಕುಮಾರ್ ಗುಡಿಹಟ್ಟಿ ಎಂಬ 3 ತಮ್ಮಂದಿರಿದ್ದು, ಇವರ ತಂದೆ ಜಿ.ಎಲ್ ನಾರಾಯಣ ಅವರಿಗೆ ಶಿರಹೊಳಲು ಗ್ರಾಮದ ಸರ್ವೆ ನಂ: 2/34 ರಲ್ಲಿ, 8.10 ಏಕ್ರೆ ಜಮೀನು ಒಟ್ಟು ಕುಟುಂಬದ ಮತ್ತು ಪಿತ್ರಾರ್ಜಿತವಾಗಿ ಬಂದ ಆಸ್ತಿಯಾಗಿದ್ದು ಇದನ್ನು ತನ್ನ ಮಕ್ಕಳಿಗೆ ಭಾಗ ಮಾಡಿ ಕೊಡದ ಕಾರಣ ಸಹೋದರರು ಆಸ್ತಿಯನ್ನು ಕಬಳಿಸಲು ಪಿರಿಯಾಪಟ್ಟಣದ ವಕೀಲರೊಂದಿಗೆ ಶಾಮೀಲಾಗಿ ತಮ್ಮ
ಸಹಿಯನ್ನು ನಕಲು ಮಾಡಲಾಗಿದೆ ಎಂದು ಅರೋಪಿಸಿದ್ದಾರೆ.
2014 ರಲ್ಲಿ, ಶಶಿಕಲಾ ಅವರ ಸಹಿಯನ್ನು ಇಂಗ್ಲಿಷಿನಲ್ಲಿ ಕೆ.ಎನ್ ಶಶಿಕಲ ಮತ್ತು ಜಿ.ಎನ್ ಶಶಿಕಲ ಎಂಬುದಾಗಿ ನಕಲು ಸಹಿ ಮಾಡಿದ್ದು ಮತ್ತು ಹೆಗ್ಗಡಳ್ಳಿಯ ರಾಜಾರಾವ್ ರವರು ತಮಗೆ ಸೇರಿದ ಆಸ್ತಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡು ಅಕ್ರಮವಾಗಿ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆಂದು ಆರೋಪಿಸಿ ಯಾವುದೇ ಸಹಿ ಮಾಡದಿದ್ದರೂ ಸಹ ತಮ್ಮ ಸಹೋದರರು ವಕೀಲರವರೊಂದಿಗೆ ಶಾಮೀಲಾಗಿ ವಾದ ಪತ್ರದಲ್ಲಿ 2014 ರಲ್ಲಿ ಫಿರ್ಯಾದಿಯ ಸಹಿಯನ್ನು ಇಂಗ್ಲಿಷಿನಲ್ಲಿ ಕೆ.ಎನ್ ಶಶಿಕಲ ಮತ್ತು ಜಿ.ಎನ್ ಶಶಿಕಲ ಎಂಬುದಾಗಿ ನಕಲು ಸಹಿ ಮಾಡಿ ಕುಶಾಲನಗರ ಘನ ನ್ಯಾಯಾಲಯಕ್ಕೆ O S No 166/2014 ರಂತೆ ದಾವೆ ಹೂಡಿದ್ದ ವಿಷಯವನ್ನು 2019 ರಲ್ಲಿ ತಿಳಿದ ಫಿರ್ಯಾದುದಾರರು ನ್ಯಾಯಾಲಯದ ಮೊರೆ ಹೋಗಿ 2021ರಲ್ಲಿ ತನ್ನ ಸಹಿ ಪೋರ್ಜರಿ ಆಗಿರುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದು ಮೇಲ್ಕಂಡ ಶಿರಹೊಳಲು ಗ್ರಾಮದ ಸರ್ವೆ ನಂ: 2/34 ರಲ್ಲಿ, 8.10 ಏಕ್ರೆ ಜಮೀನಿಗೆ ಸಂಬಂಧಿಸಿದಂತೆ ಬೇರೆಯವರಿಗೆ ಪರಬಾರೆ ಮಾಡದಂತೆ, ಕಟ್ಟಡ ನಿರ್ಮಾಣ ಮಾಡದಂತೆ ಮತ್ತು ಅಧಿಕೃತ ಪ್ರವೇಶ ಮಾಡದಂತೆ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದರು.
ಈ ವಿಚಾರ ಗೊತ್ತಿದ್ದರೂ ಅವರ ತಂದೆ
ಆಸ್ತಿಯನ್ನು ತನ್ನ ಕೊನೆ ಮಗ ಸಂಪತ್ ಕುಮಾರ್ ಗುಡಿಹಟ್ಟಿರವರಿಗೆ ದಾನಪತ್ರದ ಮೂಲಕ ನೋಂದಣಿ ಮಾಡಿಕೊಟ್ಟಿರುತ್ತಾರೆ, 2017 ರಲ್ಲಿ, ಅಶೋಕರವರು ಮೃತಪಟ್ಟಿದ್ದು ಹಾಗೂ ಮಧ್ಯಂತರ ತಡೆಯಾಜ್ಞೆಯ ವಿಷಯವನ್ನು ಫಿರ್ಯಾದುದಾರರು ಕೂಡಿಗೆ ಪಂಚಾಯ್ತಿಯ ಪಿಡಿಒ ಮತ್ತು ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಪಿಡಿಒ ಮತ್ತು ಅಧ್ಯಕ್ಷರು ಶಾಮೀಲಾಗಿ ದಿನಾಂಕ 7-2-2022 ಮತ್ತು 3-10-2023 ರಂದು ಸಾಮಾನ್ಯ ಸಭೆಯಲ್ಲಿ ನಡಾವಳಿಯನ್ನು ಪಾಸು ಮಾಡಿ ಮೇಲ್ಕಂಡ ಜಮೀನಿನ ಕಟ್ಟಡದಲ್ಲಿರುವ ಅಂಗಡಿ ಮಳಿಗೆಗೆಗಳಿಗೆ ಲೈಸನ್ಸ್ ಗಳನ್ನು ನೀಡಿ 11 B ಖಾತೆ ಮಾಡಿ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಶಶಿಕಲಾ ಅವರು ಕುಶಾಲನಗರ ನ್ಯಾಯಾಲಯಕ್ಕೆ ತನ್ನ ಭಾಗಾಂಶದ ಹಕ್ಕನ್ನು ರುಜುವಾತು ಪಡಿಸಲು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ವೇಳೆಯಲ್ಲಿ ತಂದೆ ಮತ್ತು ಸಹೋದರರರು ಅಡ್ಡಗಟ್ಟಿ ದಾವೆಯನ್ನು ಸಲ್ಲಿಸಿರುವುದು ನಾನೇ ಎಲ್ಲಾ ಸಹಿ ನನ್ನದೇ ಎಂದು ನೀನು ಒಪ್ಪಿಕೋ ಇಲ್ಲದಿದ್ದರೆ ಕೊಲೆ ಮಾಡುತ್ತೇವೆಂದು ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆಂದು ದೂರು ದಾಖಲಿಸಿದ್ದು ಈ ಸಂಬಂದ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪರವಾನಗಿ ನೀಡಿದ ಕೂಡಿಗೆ ಗ್ರಾಪಂ ಅಧ್ಯಕ್ಷೆ, ಪಿಡಿಒ ಸೇರಿದಂತೆ ಫೋರ್ಜರಿ ಹಾಗೂ ಕೊಲೆಬೆದರಿಕೆ ಒಡ್ಡಿದ ಸಹೋದರರ ವಿರುದ್ದ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
Back to top button
error: Content is protected !!